ಹೆಂಡತಿಯನ್ನು ಕೊಂದು ಕತೆ ಕಟ್ಟಿದ ಗಂಡ, ಸತ್ಯ ಹೇಳಿದ ಮಗು, ಕೇಸ್‌ಗೆ ಸಿಕ್ತು ತಿರುವು

ಮೈಸೂರು ಜಿಲ್ಲೆ ಎಚ್‌ಡಿ ಕೊಟೆ ತಾಲೂಕಿನ ಪೊನ್ನಮ್ಮನ ಕಟ್ಟೆ ಎಂಬ ಊರಲ್ಲಿ ನಹೀಮ ಪಾಷಾ ಹಾಗೂ ಸಲ್ಮಾ ಎಂಬ ದಂಪತಿ ವಾಸವಾಗಿದ್ದರು. ಈ ದಂಪತಿಗೆ ಇಬ್ಬರು ಮಕ್ಕಳಿದ್ದರು. ಅಂದು ಡಿ. 13 ನೇ ತಾರೀಖು ನಹೀಂ ಪಾಷಾ ಪೊಲೀಸ್ ಸ್ಟೇಷನ್‌ಗೆ ಓಡಿ ಬರುತ್ತಾರೆ. 

First Published Dec 19, 2020, 1:53 PM IST | Last Updated Dec 19, 2020, 1:56 PM IST

ಮೈಸೂರು (ಡಿ. 19):ಇಲ್ಲಿನ ಎಚ್‌ಡಿ ಕೊಟೆ ತಾಲೂಕಿನ ಪೊನ್ನಮ್ಮನ ಕಟ್ಟೆ ಎಂಬ ಊರಲ್ಲಿ ನಹೀಮ ಪಾಷಾ ಹಾಗೂ ಸಲ್ಮಾ ಎಂಬ ದಂಪತಿ ವಾಸವಾಗಿದ್ದರು. ಈ ದಂಪತಿಗೆ ಇಬ್ಬರು ಮಕ್ಕಳಿದ್ದರು. ಅಂದು ಡಿ. 13 ನೇ ತಾರೀಖು ನಹೀಂ ಪಾಷಾ ಪೊಲೀಸ್ ಸ್ಟೇಷನ್‌ಗೆ ಓಡಿ ಬರುತ್ತಾರೆ.

ಕಾಂಗ್ರೆಸ್‌ಗೆ ಮುಟ್ಟಿ ನೋಡಿಕೊಳ್ಳುವ ಹಾಗೆ ಟಕ್ಕರ್ ಕೊಟ್ಟ ಟಗರು ಸಿದ್ದು; ಕೈ ಪಾಳಯಕ್ಕೆ ಬಿತ್ತು ಗುದ್ದು!

'ಸಾರ್ ನಮ್ಮನೆ ಬಾತ್‌ರೂಂ ಗೋಡೆ ಕುಸಿದು ಬಿದ್ದಿದೆ. ಹೆಂಡತಿ ಅದರಡಿ ಸಿಲುಕಿದ್ಲು. ಆಸ್ಪತ್ರೆಗೆ ಸೇರಿಸಿದರೂ ಬದುಕುಳಿಯಲಿಲ್ಲ' ಎಂದು ಗೋಗರೆಯುತ್ತಾನೆ. ಸಲ್ಮಾ ಸಾವು ಕುಟುಂಬದವರಿಗೆ ದೊಡ್ಡ ಆಘಾತವನ್ನೇ ಕೊಟ್ಟಿತ್ತು. ಇತ್ತ ಸಲ್ಮಾ ಅಂತ್ಯಕ್ರಿಯೆ ಮಾಡುವ ಸಿದ್ಧತೆ ಶುರುವಾಗಿತ್ತು. ಆಗ ಸಲ್ಮಾಳ ಮಗ ಮಾವನಿಗೆ ಸತ್ಯವನ್ನು ಹೇಳಿ ಬಿಟ್ಟಿದ್ದ. ತಾಯಿಯನ್ನು ಅಪ್ಪನೇ ಸಾಯಿಸಿದ್ದು ಎಂದು ಹೇಳುತ್ತಾನೆ. ಅಲ್ಲಿಂದ ಇಡೀ ಪ್ರಕರಣ ತಿರುವು ಪಡೆದುಕೊಳ್ಳುತ್ತದೆ. ಏನದು ತಿರುವು? ನೋಡೋಣ ಬನ್ನಿ..!

Video Top Stories