ಹುಬ್ಬಳ್ಳಿ ಕಾಲೇಜು ವಿದ್ಯಾರ್ಥಿನಿಯರ ಅಶ್ಲೀಲ ಫೋಟೋ ಅಪ್ಲೋಡ್, ಮೂವರ ಬಂಧನ

ಹುಬ್ಬಳ್ಳಿಯ ಸಮರ್ಥ ಕಾಲೇಜಿನ ವಿದ್ಯಾರ್ಥಿನಿಯ ಅಶ್ಲೀಲ ಫೋಟೋ ಅಪ್ಲೋಡ್‌ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ವಿದ್ಯಾರ್ಥಿಗಳನ್ನು ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದಾರೆ.

First Published Aug 13, 2023, 6:22 PM IST | Last Updated Aug 13, 2023, 6:22 PM IST

ಹುಬ್ಬಳ್ಳಿ (ಆ.13): ಹುಬ್ಬಳ್ಳಿಯ ಸಮರ್ಥ ಕಾಲೇಜಿನ ವಿದ್ಯಾರ್ಥಿನಿಯ ಅಶ್ಲೀಲ ಫೋಟೋ ಅಪ್ಲೋಡ್‌ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ವಿದ್ಯಾರ್ಥಿಗಳನ್ನು ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದಾರೆ. ಇದರಲ್ಲಿ ಕಿರಣ್‌ ಚೌಹಾನ್‌ಗೌಡರ್‌ ಇದರ ಮಾಸ್ಟರ್‌ ಮೈಂಡ್‌ ಆಗಿದ್ದಾನೆ ಎಂದು ತಿಳಿದುಬಂದಿದೆ.

ಹೌದು, ತಮಗೆ ಯಾವುದೇ ಗರ್ಲ್‌ಫ್ರೆಂಡ್‌ ಇಲ್ಲ, ತಮ್ಮನ್ನು ಯಾವುದೇ ಹುಡಗೀರು ಲವ್ ಮಾಡುತ್ತಿಲ್ಲ ಎಂದು ಬೇಸತ್ತ ವಿದ್ಯಾರ್ಥಿಗಳಾದ ಕಿರಣ್‌ ಚೌಹಾನ್‌ಗೌಡರ್, ರಜಿಕಾಂತ್‌ ಹಾಗೂ ನವೀನ್‌ ಎಂಬ ವಿದ್ಯಾರ್ಥಿಗಳು ತಮ್ಮದೇ ಕಾಲೇಜಿನ ವಿದ್ಯಾರ್ಥಿಗಳಿಗೆ ಕಿರುಕುಳ ನೀಡಲು ಮುಂದಾಗಿದ್ದಾರೆ. ಇದರಿಂದ ತಮ್ಮದೇ ಕಾಲೇಜಿನ ವಿದ್ಯಾರ್ಥಿನಿಯರ ಫೋಟೋಗಳನ್ನು ತೆಗೆದು, ಅವುಗಳನ್ನು ಅಶ್ಲೀಲವಾಗಿ ಎಡಿಟ್‌ ಮಾಡಿ ಮೂರು ತಿಂಗಳಿಂದ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದರು. ಮೊದಲು ಫೇಸ್‌ಬುಕ್‌ ಮತ್ತು ಇನ್ಸ್ಟಾಗ್ರಾಮ್‌ಗಳಲ್ಲಿ ಕಾಶ್ಮೀರ್‌009 ಹೆಸರಿನ ಫೇಕ್ ಖಾತೆ ತೆರೆದು ಫೋಟೋ ಅಪ್ಲೋಡ್‌ ಮಾಡುತ್ತಿದ್ದರು. ಇದರಿಂದ ತೀವ್ರ ಬೇಸತ್ತ ವಿದ್ಯಾರ್ಥಿಗಳು ಠಾಣೆಹೆ ದೂರು ನೀಡಿದ ನಂತರ ಆರೋಪಿ ವಿದ್ಯಾರ್ಥಿಗಳನ್ನು ಬಂಧಿಸಿ ಜೈಲಿಗಟ್ಟಲಾಗಿದೆ.