'ಮೋಡಿಯಾ ಮಾಡಿದೋಳ ಪರಸಂಗ ಐತೇ..' ಕೊಲೆಯನ್ನು ಬಯಲು ಮಾಡಿದ ಮಿಸ್ಸಿಂಗ್‌ ಕೇಸ್‌!

ಎರಡೂವರೆ ತಿಂಗಳ ಹಿಂದೆ ನಡೆದ ಕೊಲೆ ಪ್ರಕರಣ ಇದು. ಹಾವೇರಿಯಲ್ಲಿ ಒಂದು ಮೃತದೇಹ ಸಿಗುತ್ತೆ. ಆದರೆ, ಇಡೀ ಮೃತದೇಹದಲ್ಲಿ ಸಿಕ್ಕಿದ್ದು ವ್ಯಕ್ತಿಯ ಕಾಲುಗಳು ಮಾತ್ರ. ಅಷ್ಟರ ಮಟ್ಟಿಗೆ ಸುಟ್ಟುಕರಕಲಾಗಿದ್ದ ದೇಹ ಯಾರದು ಎಂದು ತನಿಖೆ ಮಾಡಿದ ಪೊಲೀಸರು ಕೊನೆಗೂ ಪ್ರಕರಣದಲ್ಲಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

First Published Nov 8, 2022, 5:48 PM IST | Last Updated Nov 8, 2022, 5:48 PM IST

ಹಾವೇರಿ (ನ.8): ಯಾವುದೇ ಒಂದು ಕ್ಲೂ ಕೂಡ ಇಲ್ಲದೆ ನಡೆದ ಒಂದು ಕೊಲೆಯನ್ನು ಹಾವೇರಿ ಪೊಲೀಸರು ಯಶಸ್ವಿಯಾಗಿ ಬೇಧಿಸಿದ್ದಾರೆ. ಸಾಲ ಕೊಡ್ತೀನಿ ಅಂತ ಕರೆಸಿ ಸಕ್ರಪ್ಪ ಲಮಾಣಿ ಹೆಸರಿನ ವ್ಯಕ್ತಿಯನ್ನು ಕೊಂದು ಹಾಕಿದ್ದರು. ಕೊಲೆಗಾರರಿಗೆ ಸ್ಕೆಚ್‌ ಹಾಕಿ ಕೊಟ್ಟಿದ್ದು ಆತನ ಹೆಂಡತಿ. ಅನೈತಿಕ ಸಂಬಂಧದ ಕಾರಣದಿಂದಾಗಿ ಸಕ್ರಪ್ಪನನ್ನು ಹೆಂಡತಿಯೇ ಕೊಲೆ ಮಾಡಿದ್ದರು.

ಮಗಳು ಕೊಲೆ ಮಾಡಿಸಿದ್ರೆ ಚಿಕ್ಕಪ್ಪನಾದವನು ಸಕ್ರಪ್ಪ ಲಮಾಣಿಯ ದೇಹಕ್ಕೆ ಬೆಂಕಿ ಇಟ್ಟಿದ್ದ. ಕೊಲೆ ಮಾಡಿದ ಮರುದಿನ ಶವವನ್ನು ಟೈರ್‌ ಹಾಕಿ ಸುಟ್ಟು ಹಾಕಿ ಗುರುತೇ ಸಿಗದಂತೆ ಮಾಡಿದ್ದರು. ಆದರೆ, ಕೊಲೆಗಾರರು ಚಾಪೆ ಕೆಳಗೆ ನುಸುಳಿದರೆ ಪೊಲೀಸರು ರಂಗೋಲಿ ಕೆಳೆಗೆ ನುಸುಳಿದ್ದರು. ಆ ಕೊಲೆಯ ಬೆನ್ನು ಬಿದ್ದ ಪೊಲೀಸರಿಂಗೆ ಸಿಕ್ಕಿದ್ದು ರೋಚಕ ಟ್ವಿಸ್ಟ್‌ಗಳು.

ಅನೈತಿಕ ಸಂಬಂಧಕ್ಕೆ ಅಡ್ಡಿಯಾಗಿದ್ದ ಪತಿಯನ್ನೇ ಹತ್ಯೆಗೈದು ಸುಟ್ಟಳು!

ಕಾಲಿಗೆ ಆಗಿದ್ದ ಗಾಯ ನೋಡಿ ಕೊಲೆಯಾದ ವ್ಯಕ್ತಿ ಸಕ್ರಪ್ಪ ಎಂದು ಕುಟುಂಬಸ್ಥರು ಗುರುತು ಹಿಡಿದಿದ್ರು. ಮೃತ ಪಟ್ಟ ವ್ಯಕ್ತಿ ಸಕ್ರಪ್ಪ ಅಂತ ಖಚಿತವಾದ ಮೇಲೆ ಪೊಲೀಸರಿಗೆ ಕೊಲೆಗಡುಕರ ಪತ್ತೆ ದಾರಿ ಬಹಳ ಸುಲಭ ಆಗಿ ಬಿಡ್ತು. ಸಕ್ರಪ್ಪನಿಗೆ ಗ್ರಾಮದಲ್ಲಿ ಯಾರಾದ್ರೂ ಶತ್ರುಗಳಿದ್ದಾರ ಅಂತ ಪೊಲೀಸರು ಮಾಹಿತಿ ಪಡೆಯಲು ಮುಂದಾಗುತ್ತಾರೆ. ಆಗಲೇ ನೋಡಿ ಅವರಿಗೆ ಒಂದು ಮಾಹಿತಿ ಸಿಕ್ಕಿದ್ದು. ಆ ಮಾಹಿತಿಯನ್ನ ಆಧರಿಸಿ ಇಬ್ಬರನ್ನ ಎತ್ತಾಕೊಂಡು ಬಂದಾಗಲೇ ಗೊತ್ತಾಗಿದ್ದು ಅವನ ಕಥೆ ಮುಗಿಸಿದವರಲ್ಲಿ ಆತನ ಹೆಂಡತಿ ಕೂಡ ಒಬ್ಬಳು ಅನ್ನೋದು.