ಹರ್ಷನ ಕೊಲೆ ವಿಚಾರ, ಶಿವಮೊಗ್ಗ ಪೊಲೀಸರ ಮುಂದಿದೆ ಹಲವು ಸವಾಲುಗಳು
ಶಿವಮೊಗ್ಗದಲ್ಲಿ ನಡೆದ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೋಲಿಸ್ ಇಲಾಖೆಗೆ ಹಲವು ಸವಾಲುಗಳಿವೆ.
ಶಿವಮೊಗ್ಗ(ಫೆ.24): ಶಿವಮೊಗ್ಗದಲ್ಲಿ (Shivamogga) ನಡೆದ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೋಲಿಸ್ ಇಲಾಖೆಗೆ ಹಲವು ಸವಾಲುಗಳಿವೆ. ಮೊಬೈಲ್‌ನಲ್ಲಿ ಮಾತನಾಡುವಾಗ ಹರ್ಷ (Harsha) ಮೂವರು ಸ್ನೇಹಿತರೊಂದಿಗೆ ಇದ್ದ ಎನ್ನಲಾಗಿದೆ. ಇದರ ಜೊತೆಗೆ ಕೊಲೆಗೂ ಮುನ್ನ ಇಬ್ಬರು ಅಪರಿಚಿತ ಹುಡುಗಿಯರು ವಾಟ್ಸಾಪ್ ಮೂಲಕ ಹರ್ಷನಿಗೆ ವೀಡಿಯೋ ಕಾಲ್ ಮಾಡಿ ಆತ ಎಲ್ಲಿದ್ದಾನೆ ಎಂದು ಮಾಹಿತಿ ಪಡೆದುಕೊಂಡಿದ್ದರು ಎನ್ನಲಾಗಿದೆ. ಕೊಲೆಯಾದ ಬಳಿಕ ಹರ್ಷನ ಫೋನ್ ಕೂಡ ನಾಪತ್ತೆಯಾಗಿದೆ. ಹರ್ಷನ ಲೊಕೇಷನ್ ತಿಳಿದುಕೊಳ್ಳುವುದಕ್ಕಾಗಿ ಹುಡುಗಿಯರನ್ನು ದಾಳವಾಗಿ ಬಳಸಿಕೊಳ್ಳಲಾಗಿತ್ತೇ ಎಂಬ ಪ್ರಶ್ನೆಯೂ ಮೂಡಿದೆ.