ಸಾಲ ಹಿಂದಿರುಗಿಸುವಂತೆ ಕಿರುಕುಳ: ವಿಡಿಯೋ ಮಾಡಿ ಪ್ರಾಣಬಿಟ್ಟ ವ್ಯಕ್ತಿ
ಸಾಲ ಮರು ಪಾವತಿಗೆ ಸಹಕಾರಿ ಬ್ಯಾಂಕ್ ಅಧ್ಯಕ್ಷನ ಕಿರುಕುಳದ ಆರೋಪ ಮಾಡಿ, ಅದನ್ನ ವಿಡಿಯೋ ಮಾಡಿ, ವಾಟ್ಸಪ್ ಸ್ಟೇಟಸ್ ಹಾಕಿ ವ್ಯಕ್ತಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಂಗಳೂರು ಹೊರವಲಯದ ಪೆರ್ಮಾಯಿ ಎಂಬಲ್ಲಿ ನಡೆದಿದೆ.
ಪೆರ್ಮಾಯಿ ನಿವಾಸಿ ಮನೋಹರ್ ಪಿರೇರಾ (46) ಆತ್ಮಹತ್ಯೆಗೆ ಶರಣಾದ ವ್ಯಕ್ತಿ. ಮನೆಯ ಕಾರಣಕ್ಕೆ ಎಂಸಿಸಿ ಬ್ಯಾಂಕಿನಿಂದ 15 ಲಕ್ಷ ಸಾಲ ಮಾಡಿಕೊಂಡಿದ್ದರು. 15 ವರ್ಷಗಳ ಹಿಂದೆ ಪ್ಯಾರಾಲಿಸಿಸ್ ಆಗಿ ಕಾಲು ಊನಗೊಂಡಿತ್ತು. ಕೋವಿಡ್ ಬಳಿಕ ನಷ್ಟಕ್ಕೀಡಾಗಿ ಬ್ಯಾಂಕ್ ಸಾಲ ಕಟ್ಟಲು ಆಗಿರಲಿಲ್ಲ.