ಕಲಬುರಗಿಯಲ್ಲಿ ರೇಪ್& ಮರ್ಡರ್: ಅಪ್ರಾಪ್ತ ಆರೋಪಿ ಸೆರೆ
ಮಳವಳ್ಳಿಯ ಅಮಾನುಷ ಘಟನೆ ಮಾಸುವ ಮುನ್ನವೇ ಕಲಬುರಗಿಯಲ್ಲಿ ಮತ್ತೊಂದು ಹೀನ ಕೃತ್ಯ ನಡೆದಿದ್ದು, 15 ವರ್ಷದ ಬಾಲಕಿಯನ್ನು ಅತ್ಯಾಚಾರಗೈದು ಕೊಲೆ ಮಾಡಲಾಗಿದೆ.
ಕಲಬುರಗಿ ಜಿಲ್ಲೆಯ ಆಳಂದ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬಹಿರ್ದೆಸೆಗೆ ಹೋಗಿದ್ದ ಬಾಲಕಿಯನ್ನು 16 ವರ್ಷದ ಐಟಿಐ ಓದುತ್ತಿದ್ದ ಬಾಲಕ ಅತ್ಯಾಚಾರವೆಸಗಿ ಕೊಲೆಗೈದಿದ್ದಾನೆ. ಮೊಬೈಲ್ನಲ್ಲಿ ಅಶ್ಲೀಲ ದೃಶ್ಯಗಳನ್ನ ನೋಡಿ ಆ ಬಾಲಕ ಅತ್ಯಾಚಾರ ಮಾಡಿದ್ದು, ಬಳಿಕ ಮರ್ಯಾದೆಗೆ ಅಂಜಿ ಕೊಲೆ ಮಾಡಿದ್ದಾನೆ. ಈ ಘಟನೆ ವಿರೋಧಿಸಿ ಎಲ್ಲಡೆ ಪ್ರತಿಭಟನೆ ನಡೆದಿದ್ದು, ಪೊಲೀಸರು 24 ಗಂಟೆಗಳಲ್ಲಿಯೇ ಆರೋಪಿಯನ್ನು ಬಂಧಿಸಿದ್ದಾರೆ.
ಬೆಚ್ಚಿ ಬೀಳಿಸುತ್ತಿದೆ ಹಾವೇರಿ ರೈತರ ಆತ್ಮಹತ್ಯೆ, 10 ತಿಂಗಳಲ್ಲಿ 112 ಆತ್ಮಹತ್ಯೆ ಕೇಸ್!