Fraud: ನಿಮ್ಮನ್ನ ವಂಚಿಸಲು ಕಾಯುತ್ತಿದೆ ಆ ಒಂದು ಗ್ಯಾಂಗ್..! ಲಿಂಕ್ ಕ್ಲಿಕ್ ಮಾಡಿದ್ರೆ ನಿಮ್ಮ ಅಕೌಂಟ್ ಖಾಲಿ..!
ಕೆಲಸ ಕೊಡ್ತೀವಿ ಅಂತ ವಂಚಿಸಿದ್ದು 160 ಕೋಟಿ
ಮೂರು ದಿನದಲ್ಲಿ 13 ಲಕ್ಷ ಕಳೆದುಕೊಂಡ ಟೆಕ್ಕಿ..!
28 ರಾಜ್ಯಗಳಲ್ಲಿ ವಂಚಿಸುತ್ತಿದ್ದವರು ಅಂದರ್..!
ಆತ ಕೆಲಸಕ್ಕೆ ಹೋಗಿ ಸಾವಿರ ಲೆಕ್ಕದಲ್ಲಿ ಸಂಬಳ ಪಡೆಯುತ್ತಿದ್ದ. ಆದ್ರೆ ಆವತ್ತೊಂದು ದಿನ ಅವನ ಮೊಬೈಲ್‌ಗೆ(Mobile) ಪಾರ್ಟ್ ಟೈಂ ಜಾಬ್‌ನ(Part time job) ಆಫರ್ ಬಂದಿತ್ತು. ಮನೆಯಲ್ಲೇ ಕೂತು ಲಕ್ಷ ಲಕ್ಷ ದುಡ್ಡು ಸಂಪಾದಿಸುವ ಕೆಲಸ ಅದು. ಅದನ್ನ ನೋಡ್ತಿದ್ದಂತೆ ಆತ ಆ ಆಫರ್‌ನ ಹಿಂದೆ ಬಿದ್ದ. ಆದ್ರೆ ಆ ಮೆಸೇಜ್(Message) ಕಳಿಸಿದ್ದು ಒಬ್ಬ ಫ್ರಾಡ್(Fraud) ಅನ್ನೋದು ಗೊತ್ತಾಗುವಷ್ಟರಲ್ಲೇ ಆತ 13 ಲಕ್ಷ ಕಳೆದುಕೊಂಡಿದ್ದ. ಸದ್ಯ ಈ ಕಿರಾತಕರನ್ನೆಲ್ಲಾ ಬಂಧಿಸಿರುವ ಪೊಲೀಸರು ಇವರು ಯಾರಿಗೆಲ್ಲಾ ವಂಚಿಸಿದ್ದಾರೆ ಅಂತ ವಿಚಾರಿಸುತ್ತಿದ್ದಾರೆ. ಆದ್ರೆ ಇವರ ಬಗ್ಗೆ ಕ್ರೈಂ ಬ್ರಾಂಚ್‌ಗೆ ಇನ್ಫಾರ್ಮೆಷನ್ ಕೊಟ್ಟವರು ಯಾರು ಅನ್ನೋದನ್ನ ಹುಡುಕಿದಾಗ ನಮಗೆ ಸಿಕ್ಕಿದ್ದು ಇದೇ ಗ್ಯಾಂಗ್‌ನಿಂದದ ವಂಚನೆಗೊಳಗಾದ ವ್ಯಕ್ತಿ. ಆವತ್ತೊಂದು ದಿನ ಟೆಕ್ಕಿಗೆ ಪಾರ್ಟ್ ಟೈಂ ಕೆಲಸ. ಮನೆಯಲ್ಲೇ ಕೂತು ಲಕ್ಷ ಲಕ್ಷ ಸಂಪಾಧಿಸಿಬಹುದು ಅನ್ನೋ ಮೆಸೇಜ್ ಟೆಲಿಗ್ರಾಂನಲ್ಲಿ ಬರುತ್ತೆ. ಆದ್ರೆ ಬುದ್ಧಿವಂತರೇ ಬೇಗ ಹಳ್ಳಕ್ಕೆ ಬೀಳೋದು ಎಂಬಂತೆ. ಆತ ಆ ಮೆಸೇಜ್‌ಗೆ ರಿಪ್ಲೈ ಮಾಡಿದ್ದ ಅಷ್ಟೇ. ಮೊದಲಿಗೆ ಯೂಟ್ಯೂಬ್ ಲಿಂಗ್ ಕ್ಲಿಕ್ ಮಾಡಿದ್ರೆ ದುಡ್ಡು ಕೊಡ್ತೀವಿ ಅಂತ ಹೇಳಿ ಕೆಲವು ಲಿಂಕ್ಗಳನ್ನ ಕಳಿಸಿದ್ರು. ಅದಕ್ಕೆ 2 ಸಾವಿರ ಹಣವನ್ನೂ ಕೊಟ್ಟರು. ಅಷ್ಟೇ 2 ಸಾವಿರ ಕೊಟ್ಟು ಇದೇ ಟೆಕ್ಕಿಯಿಂದ 13 ಲಕ್ಷ ಹಣವನ್ನ ಪೀಕಿತ್ತು ಆ ಗ್ಯಾಂಗ್.
ಇದನ್ನೂ ವೀಕ್ಷಿಸಿ: Mandya Politics: ಸ್ವಾಮಿ Vs ಸ್ವಾಮಿ.. ಮತ್ತೊಂದು ರಣರಂಗಕ್ಕೆ ಸಾಕ್ಷಿಯಾಗುತ್ತಾ ಮಂಡ್ಯ..?