Asianet Suvarna News Asianet Suvarna News

ಒಂದೇ ಕುಟುಂಬದ ಐವರ ದುರಂತ ಸಾವು; ಕೌಟುಂಬಿಕ ‌ಕಲಹಗಳೇ ಕಾರಣವಾಯ್ತಾ..?

Sep 18, 2021, 10:08 AM IST

ಬೆಂಗಳೂರು (ಸೆ. 18): ಒಂದೇ ಕುಟುಂಬದ ಐವರ ದುರಂತ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ  ಮನೆ ಯಜಮಾನ ಶಂಕರ್ ಕೌಟುಂಬಿಕ ‌ಕಲಹಗಳಿಂದ ಬೇಸತ್ತಿದ್ದರು ಎನ್ನಲಾಗಿದೆ. 

ಒಂದೇ ಕುಟುಂಬದ ಐವರು ಆತ್ಮಹತ್ಯೆಗೆ ಶರಣು, ಪವಾಡಸದೃಶ ರೀತಿಯಲ್ಲಿ ಮಗು ಬಚಾವ್!

ಮಕ್ಕಳನ್ನು ಓದಿಸಿ, ಅವರ ಭವಿಷ್ಯಕ್ಕೆ ದಾರಿ ಮಾಡಿಕೊಟ್ಟಿದ್ದರೂ ಮನೆಯೊಳಗಿನ ಕಲಹಗಳು ನಿಲ್ಲುತ್ತಿರಲಿಲ್ಲ.  ಸಾಂಸಾರಿಕ ಸಮಸ್ಯೆಗಳಿಂದ ಹೊರ ಬರಲು ಆಶ್ರಮ ಕಟ್ಟಲು ತೀರ್ಮಾನಿಸಿದ್ದರು ಶಂಕರ್. ಅದಕ್ಕಾಗಿ 5 ಎಕರೆ ಜಮೀನು‌ ಖರೀದಿ ಮಾಡಲು ಮುಂದಾಗಿದ್ದರು.   ಜಾಗದ ರಿಜಿಸ್ಟ್ರೇಷನ್ ಕೆಲಸ ಮಾತ್ರ ಬಾಕಿ ಉಳಿದಿತ್ತು. ಹೆಣ್ಣು ಮಕ್ಕಳನ್ನ ಗಂಡನ ಮನೆಗೆ ಕಳುಹಿಸಿ, ಮಗನ ಮದುವೆ ಮಾಡಿ ಅಶ್ರಮ ಸೇರುವ ಆಲೋಚನೆ ಮಾಡಿಕೊಂಡಿದ್ದರು ಶಂಕರ್ ಎನ್ನಲಾಗಿದೆ.