Asianet Suvarna News Asianet Suvarna News

ಪ್ರವೀಣ್‌ ನೆಟ್ಟಾರು ಹತ್ಯೆ ಆರೋಪಿಗಳಿಗೆ ಡೆಡ್‌ಲೈನ್‌: ನಾಳೆಯೊಳಗೆ ಶರಣಾಗುವಂತೆ ನ್ಯಾಯಾಧೀಶರ ಖಡಕ್‌ ಆದೇಶ

ಪ್ರವೀಣ್‌ ನೆಟ್ಟಾರು ಹತ್ಯೆ ಆರೋಪಿಗಳು ಜೂನ್‌ 30 ರೊಳಗೆ ಸ್ವಯಂ ಪ್ರೇರಿತವಾಗಿ ಶರಣಾಗುವಂತೆ ಎನ್‌ಐಎ ಕೋರ್ಟ್‌ ಆದೇಶ ಹೊರಡಿಸಿದೆ.
 

First Published Jun 29, 2023, 9:42 AM IST | Last Updated Jun 29, 2023, 9:42 AM IST

ದಕ್ಷಿಣ ಕನ್ನಡ: ಪ್ರವೀಣ್‌ ನೆಟ್ಟಾರು ಹತ್ಯೆ ಆರೋಪಿಗಳು ಸ್ವಯಂ ಪ್ರೇರಿತವಾಗಿ ಜೂನ್‌.30ರೊಳಗೆ ಹಾಜರಾಗಬೇಕು ಎಂದು ಎನ್‌ಐಎ ಕೋರ್ಟ್‌ ಖಡಕ್‌ ಆದೇಶ ಹೊರಡಿಸಿದೆ. ಒಂದು ವೇಳೆ ಶರಣಾಗದಿದ್ರೆ, ಆಸ್ತಿಯನ್ನು ಜಪ್ತಿ ಮಾಡಲಾಗುವುದು ಎಂದು ಎನ್‌ಐಎ ಕೋರ್ಟ್‌ ಹೇಳಿದೆ. ಈ ಬಗ್ಗೆ ಸುಳ್ಯದಲ್ಲಿ ಎನ್‌ಐಎ ಮೈಕ್‌ ಅನೌನ್ಸ್‌ಮೆಂಟ್‌ ಸಹ ಮಾಡಿದೆ. ಇದೇ ವೇಳೆ ನೆಟ್ಟಾರು ಹತ್ಯೆ ಆರೋಪಿಗಳ ಸುಳಿವು ಕೊಟ್ಟವರಿಗೆ ನಗದು ಬಹುಮಾನ ನೀಡುವುದಾಗಿಯೂ ಘೋಷಿಸಲಾಗಿದೆ. 2022ರ ಜುಲೈ 26ರಂದು ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಬೆಳ್ಳಾರೆ ಗ್ರಾಮದಲ್ಲಿ ಪ್ರವೀಣ್ ನೆಟ್ಟಾರು ಹತ್ಯೆ ನಡೆದಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇದುವರೆಗೆ 21 ಅರೋಪಿಗಳನ್ನು ಬಂಧಿಸಿದ್ದು,ಅವರ ವಿರುದ್ದ ಚಾರ್ಜ್‌ಶೀಟ್‌ ಸಲ್ಲಿಸಲಾಗಿದೆ.

ಇದನ್ನೂ ವೀಕ್ಷಿಸಿ: ಕರುನಾಡಿನ ಜನತೆಗೆ ಮತ್ತೊಂದು ಶಾಕ್‌: ಹಾಲಿನ ದರ 5 ರೂ. ಹೆಚ್ಚಳ ಸಾಧ್ಯತೆ ?

Video Top Stories