'ಸುಸೈಡ್ ಮಾಡಿಕೊಳ್ಳುತ್ತಿದ್ದೇನೆ' ಶಾಲಿನಿ ರಜನೀಶ್ ವಿರುದ್ಧ ಪತ್ರ ಬರೆದು FDA ನಾಪತ್ತೆ

* ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಮೆಸೇಜ್ ಹಾಕಿ ಸಿಬ್ಬಂದಿ ನಾಪತ್ತೆ
* ಕೆಳ ಹಂತದ ಅಧಿಕಾರಿಗಳು ಅನುದಾನ ಬಳಕೆ ಮಾಡಿಕೊಳ್ಳಲು ಹೇಗೆ ಸಾಧ್ಯ?
* ಶಾಲಿನಿ ರಜನೀಶ್ ವಿರುದ್ಧ ಪತ್ರ ಬರೆದಿಟ್ಟು ನಾಪತ್ತೆ
* ನಾಪತ್ತೆಯಾದ ಸಿಬ್ಬಂದಿ ಪತ್ನಿಯಿಂದ ಪೊಲೀಸರಿಗೆ ಮಾಹಿತಿ

First Published Sep 28, 2021, 7:12 PM IST | Last Updated Sep 28, 2021, 7:12 PM IST

ಶಿವಮೊಗ್ಗ(ಸೆ. 28)   ಆತ್ಮಹತ್ಯೆ(Suicide) ಮಾಡಿಕೊಳ್ಳುವಾಗಿ ಮೆಸೇಜ್ ಮಾಡಿಟ್ಟು ಶಿವಮೊಗ್ಗ(Shiovamogga) ಡಿಸಿ ಕಚೇರಿಯ ಎಫ್ ಡಿಎ ಸಿಬ್ಬಂದಿ ನಾಪತ್ತೆಯಾಗಿದ್ದಾರೆ. ನನ್ನನ್ನು  ಹುಡುಕುವ ಯತ್ನ ಮಾಡಬೇಡಿ ಎಂದು ಗಿರಿರಾಜ್ ಮೆಸೇಜ್ ಮಾಡಿದ್ದಾರೆ. ನನ್ನ ಸಾವಿಗೆ ಎಸಿಎಸ್ ಡಾ. ಶಾಲಿನಿ ರಜನೀಶ್ ನೇರ ಕಾರಣ ಎಂದು ವಾಟ್ಸಪ್ ಮೆಸೇಜ್ ಮಾಡಿ ನಾಪತ್ತೆಯಾಗಿದ್ದಾರೆ.

ಮೇಲಧಿಕಾರಿಗಳ ಕಿರುಕುಳ, ಕೆಎಸ್‌ಆರ್ ಟಿಸಿ ನೌಕರ ಸುಸೈಡ್

ಅನುದಾನ ಬಿಡುಗಡೆಯಲ್ಲಿ ತಾರತಮ್ಯ ಮಾಡಿದ್ದಾರೆ. ಕೆಳ ಹಂತದ ನೌಕರರು ಹಣ ಬಳಸಿಕೊಳ್ಳಲು ಹೇಗೆ ಸಾಧ್ಯ.  ನಮ್ಮ ಕೆಲಸದ ಒತ್ತಡ ಮೇಲಿನವರಿಗೆ ಹೇಗೆ ಗೊತ್ತಾಗುತ್ತದೆ. ದುದೀರ್ಘ ಪತ್ರ ಬರೆದು ಗಿರಿರಾಜ್ ನಾಪತ್ತೆಯಾಗಿದ್ದಾರೆ. 

 

Video Top Stories