ಮುದ್ದಾದ ಕೋರಿಯೋಗ್ರಾಫರ್ ಕಥೆ ಮುಗಿಸಿದ ಕ್ಯಾಬ್​ ಡ್ರೈವರ್ ಗಂಡ! ಪಕ್ಕದಲ್ಲಿದ್ದವರಿಗೆ ಗೊತ್ತೇ ಇಲ್ಲ

ಪರಸ್ಪರ ಪ್ರೀತಿಸಿ ಮದುವೆಯಾದ ಗಂಡನೇ ತನ್ನ ಕೈಯಾರೇ ಪತ್ನಿಯನ್ನು ಬರ್ಬರವಾಗಿ ಕೊಲೆ ಮಾಡಿ ಮುಗಿಸಿದ್ದಾನೆ. ಅಷ್ಟಕ್ಕೂ ಈ ಕೊಲೆಗೆ ಕಾರಣ ಏನು ಎನ್ನುವುದರ ಕಂಪ್ಲೀಟ್ ಡೀಟೈಲ್ಸ್ ಇಲ್ಲಿದೆ ನೋಡಿ

First Published Aug 30, 2024, 5:12 PM IST | Last Updated Aug 30, 2024, 5:12 PM IST

ಬೆಂಗಳೂರು: ಅವಳು ಡ್ಯಾನ್ಸರ್​​, ಸಿನಿಮಾಗಳಲ್ಲಿ ಕೋ ಡ್ಯಾನ್ಸರ್​​ ಆಗಿದ್ದ ಆಕೆ. ಕೆಲ ಸ್ಟೇಜ್​ ಪ್ರೋಗ್ರಾಮ್​ಗಳಿಗೆ ಕೊರಿಯೋಗ್ರಾಫರ್​​​ ಆಗೂ ಕೆಲಸ ಮಾಡ್ತಿದ್ದಳು. ಸುಂದರ ಚೆಲುವೆ. ವಯಸ್ಸು ಇನ್ನೂ 25. ಆದ್ರೆ ಆವತ್ತು ಡ್ಯಾನ್ಸ್​​​ ಪ್ರೋಗ್ರಾಮ್​​ ಮುಗಿಸಿಕೊಂಡು ಸ್ನೇಹಿತೆ ಜೊತೆ ಪಾರ್ಟಿ ಮಾಡಿ ಇಬ್ಬರೂ ಮನೆಗೆ ಬಂದು ನಿದ್ರೆಗೆ ಜಾರಿದ್ರು. ಆದರೆ ಬೆಳಗ್ಗೆ ಸ್ನೇಹಿತೆ ಎದ್ದು ನೋಡಿದ್ರೆ ಆಕೆ ಹೆಣವಾಗಿ ಹೋಗಿದ್ದಳು.. 

ಪಕ್ಕದಲ್ಲಿದ್ದವಳಿಗೆ ಆ ರಾತ್ರಿ ಏನಾಯ್ತು ಅನ್ನೋದೇ ಗೊತ್ತಾಗಿರಲಿಲ್ಲ.. ಅವಳನ್ನ ಬರ್ಬರವಾಗಿ ಕೊಲ್ಲಲಾಗಿತ್ತು.. ಅಷ್ಟಕ್ಕೂ ಆಕೆಯನ್ನ ಕೊಂದವರ್ಯಾರು..? ಆ ರಾತ್ರಿ ಆ ಮನೆಯಲ್ಲಿ ನಡೆದಿದ್ದೇನು..? ಒಬ್ಬ ಸುಂದರ ಹೆಣ್ಣುಮಗಳೊಬ್ಬಳ ದುರಂತ ಅಂತ್ಯದ ಕಥೆಯನ್ನು ಎಳೆಳೆಯಾಗಿ ಬಿಚ್ಚಿಡ್ತೀವಿ ನೋಡಿ