ಮಾಜಿ ಸಂಸದರ ಮಗನಿಗೂ ಡ್ರಗ್ಸ್ ಜಾಲದ ಗುನ್ನ, ಚಾಟಿಂಗ್‌ನಲ್ಲಿ ಸ್ಪೋಟಕ ಮಾಹಿತಿ!
ಸದ್ಯ ರಾಜ್ಯಾದ್ಯಂತ ಭಾರೀ ಸದ್ದು ಮಾಡುತ್ತಿರುವ ಡ್ರಗ್ಸ್ ಮಾಫಿಯಾ ಮಾಜಿ ಸಂಸದರ ಮಗನ ಕೊರಳಿಗೂ ಉರುಳಾಗುವ ಸಾಧ್ಯತೆಗಳು ಹೆಚ್ಚಾಗಿವೆ. ಮಾಜಿ ಸಂಸದರ ಮಗ ಸಂಜನಾ ಆಪ್ತ ರಾಹುಲ್ ಸಂಪರ್ಕದಲ್ಲಿದ್ದ ಎಂಬ ಮಾಹಿತಿ ಲಭ್ಯವಾಗಿದೆ.
ಬೆಂಗಲೂರು(ಸೆ.03): ಸದ್ಯ ರಾಜ್ಯಾದ್ಯಂತ ಭಾರೀ ಸದ್ದು ಮಾಡುತ್ತಿರುವ ಡ್ರಗ್ಸ್ ಮಾಫಿಯಾ ಮಾಜಿ ಸಂಸದರ ಮಗನ ಕೊರಳಿಗೂ ಉರುಳಾಗುವ ಸಾಧ್ಯತೆಗಳು ಹೆಚ್ಚಾಗಿವೆ. ಮಾಜಿ ಸಂಸದರ ಮಗ ಸಂಜನಾ ಆಪ್ತ ರಾಹುಲ್ ಸಂಪರ್ಕದಲ್ಲಿದ್ದ ಎಂಬ ಮಾಹಿತಿ ಲಭ್ಯವಾಗಿದೆ.
ಮಾಜಿ ಸಂಸದರ ಮಗ ರಾಹುಲ್ ಜೊತೆ ಹಲವಾರು ಪಾರ್ಕಾಕಾಣಿಸಿಕೊಂಡಿದ್ದ. ಅಲ್ಲದೇ ರಾಹುಲ್ ಮೊಬೈಲ್‌ನಲ್ಲಿ ಮಾಜಿ ಸಂಸದರ ಮಗನೊಂದಿಗೆ ನಡೆಸಿದ ಚಾಟ್ ಕೂಡಾ ಇದೆ ಎನ್ನಲಾಗಿದ್ದು, ಇದರಲ್ಲಿ ಅನೇಕ ಸ್ಪೋಟಕ ವಿವರಗಳು ಲಭ್ಯವಾಗಿವೆ.
ಇಬ್ಬರ ನಡುವಿನ ಮಾತುಕತೆಯಲ್ಲಿ ಡ್ರಗ್ಸ್ ಜಾಲದ ಕತೆ ಹೇಳುವ ಹತ್ತಾರು ವಿವರಗಳಿವೆ ಎಂಬ ಮಾಹಿತಿಯೂ ಲಭ್ಯವಾಗಿದೆ.