Asianet Suvarna News Asianet Suvarna News

ಅಂದು ಪತ್ನಿಪೀಡಕ..ಇಂದು ಕೊಲೆ ಆರೋಪಿ..! ಫ್ಯಾನ್ಸ್ ಜೈಲು ಸೇರಿದ್ರು..ಹೆತ್ತವರು ಬೀದಿಗೆ ಬಿದ್ರು..!

ದರ್ಶನ್ ಬಚಾವ್‌ಗೆ ಯತ್ನಿಸಿದವರಿಗೂ ತನಿಖೆ ಬಿಸಿ
ಅಸ್ತಮಾ ಹೆಚ್ಚಾಗಿ ಹಾಸಿಗೆ ಹಿಡಿದ ನಂದೀಶ್ ತಾಯಿ
ಮಕ್ಕಳ ಅಂಧಾಭಿಮಾನ ಬೀದಿಗೆ ಬಿದ್ದ ಕುಟುಂಬಗಳು

ಮೊನ್ನೆ ಪವಿತ್ರಾ ಗೌಡ, ಈಗ ದರ್ಶನ್. ಸದ್ಯ ರೇಣುಕಾಸ್ವಾಮಿಯ ಕೊಲೆ ಕೇಸ್‌ನಲ್ಲಿ(Renukaswamy murder case) ಅರೆಸ್ಟ್ ಆಗಿದ್ದ 17 ಮಂದಿ ಪರಪ್ಪನ ಅಗ್ರಹಾರಕ್ಕೆ(Parappana agrahara jail) ಶಿಫ್ಟ್ ಆಗಿದ್ದಾರೆ. ಹಾಗಂತ ದರ್ಶನ್‌ಗೆ(Darshan) ಜೈಲು ಹೊಸತೇನೂ ಅಲ್ಲ. ಈ ಹಿಂದೆಯೂ ಹೆಂಡತಿಗೆ ಹೊಡೆದು ಜೈಲು ಸೇರಿದ್ರು. ಆವತ್ತು ಪತ್ನಿ ಪೀಡಕನ್ನಾಗಿ ಒಳಗೆ ಹೋದ್ರೆ ಇವತ್ತು ಕೊಲೆ ಕೇಸ್‌ನಲ್ಲಿ(Murder case) ಜೈಲು ಸೇರಿದ್ದಾನೆ. ಅವನ ಜೊತೆ ಅವನ ಪಟಾಲಂ ಕೂಡ ಮುದ್ದೆ ಮುರಿಯೋದಕ್ಕೆ ಬಾಸ್‌ಗೆ ಸಾಥ್ ಕೊಡಲು ಹೋಗಿದ್ದಾರೆ. ಸದ್ಯ ದರ್ಶನ್ ಅಂಡ್ ಗ್ಯಾಂಗ್ ಕೊನೆಗೂ ಜೈಲುಪಾಲಾಗಿದೆ. ಪವಿತ್ರಾಗೌಡ ಅಂಡ್ ಟೀಂ ಸಹ ಜೈಲಿನಲ್ಲಿದ್ದು, ಎಲ್ಲಾ 17 ಆರೋಪಿಗಳು  ಜೈಲೂಟ ಸವಿಯುತ್ತಿದ್ದಾರೆ. ಆದ್ರೆ ದರ್ಶನ್ ಜೊತೆ ಪರಪ್ಪನ ಅಗ್ರಹಾರದಲ್ಲಿರುವ ಉಳಿದ ಆರೋಪಿಗಳ ಮನೆಯ ಸ್ಥಿತಿ ಇವತ್ತು ಯಾರಿಗೂ ಬೇಡವಾಗಿದೆ. ಸದ್ಯ ದರ್ಶನ್ ಪಟಾಲಂ ಜೈಲು ಸೇರಾಯ್ತು. ದರ್ಶನ್ ಏನೋ ಮಾಡಿದ ತಪ್ಪಿಗೆ ಜೈಲಿಗೆ ಹೋಗಿದ್ದಾರೆ. ಆದ್ರೆ ಬಾಸ್ ಬಾಸ್ ಅಂತ ಹೋಗಿ ಕೆಲವರು ತಮ್ಮ ಜೀವನವನ್ನೇ ಹಾಳು ಮಾಡಿಕೊಂಡಿದ್ದಾರೆ. ಈಗಾಗಲೇ ಕೆಲವರು ತಮ್ಮ ಪ್ರಾಣವನ್ನೇ ಕಳೆದುಕೊಂಡಿದ್ರೆ ಇನ್ನೂ ಕೆಲವು ಕುಟುಂಬ ಕಣ್ಣೀರಲ್ಲಿ ಕೈ ತೊಳೆಯುತ್ತಿವೆ.

ಇದನ್ನೂ ವೀಕ್ಷಿಸಿ:  ಕಿರಿಮಗನ ಕಾರಣಕ್ಕೆ ಅಪ್ಪನಿಗೆ ಜೈಲು, ಹಿರಿಮಗನಿಂದ ಮತ್ತೊಂದು ಸಂಕಷ್ಟ! ಸೂರಜ್ ರೇವಣ್ಣ ವಿರುದ್ಧ ಸಲಿಂಗಕಾಮದ ಆರೋಪ..!

Video Top Stories