ಧರ್ಮನಿಂದನೆ ಪೋಸ್ಟ್ ಹಾಕೋ ಮುನ್ನ ಇರಲಿ ಎಚ್ಚರ, ಸೈಬರ್ ಕ್ರೈಂನಿಂದ ಕ್ಷಿಪ್ರ ಕಾರ್ಯಾಚರಣೆ!
ಸಾಮಾಜಿಕ ಜಾಲತಾಣದಲ್ಲಿ ಕೋಮು ಸೌಹಾರ್ಧತೆ ಕದಡುವ, ಧರ್ಮನಿಂದನೆ ಪೋಸ್ಟ್‌ಗಳನ್ನು ಹಾಕಿದರೆ ಅಪಾಯ ಕಟ್ಟಿಟ್ಟ ಬುತ್ತಿ. ಇದೀಗ ಸೈಬರ್ ಕ್ರೈಂ ಪೊಲೀಸರು ಕ್ಷಿಪ್ರ ಕಾರ್ಯಾಚರಣೆಗ ಇಳಿದಿದ್ದಾರೆ.
ಮಂಗಳೂರು(ಜು.13) ಮಂಗಳೂರಿನಲ್ಲಿ ಮತ್ತೆ ಧರ್ಮನಿಂದನೆ ಪೋಸ್ಟ್ ಅಬ್ಬರ ಆರಂಭಗೊಂಡಿದೆ. ನಕಲಿ ಖಾತೆಗಳ ಮೂಲಕ ಕೊರಗಜ್ಜ ದೈವವನ್ನು ನಿಂದಿಸಿ ಹಲವು ಪೋಸ್ಟ್‌ಗಳು ಹರಿದಾಡುತ್ತಿದೆ. ಸಾಮಾಜಿಕ ಜಾಲತಾಣದಲ್ಲಿ ಕೋಮಭಾವನೆ ಕೆರಳಿಸುವ ಪೋಸ್ಟ್‌ಗಳನ್ನು ಹಾಕಿ ಮಂಗಳೂರಿನ ಶಾಂತಿ ಕದಡುವ ಪ್ರಯತ್ನ ನಡೆಯುತ್ತಿದೆ. ಈ ಕುರಿತು ಬಿಜೆಪಿ ಶಾಸಕ ಭರತ್ ಶೆಟ್ಟಿ ಮಂಗಳೂರು ಕಮಿಷನರ್‌ಗೆ ದೂರು ನೀಡಿದ್ದಾರೆ. ಇದರ ಬೆನ್ನಲ್ಲೇ ಸೈಬರ್ ಕ್ರೈಂ ಕಾರ್ಯಪ್ರವೃತ್ತಗೊಂಡಿದ್ದು, 21 ಪ್ರಕರಣ ದಾಖಲಿಸಿದೆ.