Crime News: ಹುಬ್ಬಳ್ಳಿಯಲ್ಲಿ ತರಕಾರಿ ವ್ಯಾಪಾರಿ ಮೇಲೆ ಮಾರಣಾಂತಿಕ ಹಲ್ಲೆ

ಹುಬ್ಬಳ್ಳಿಯಲ್ಲಿ ಮತ್ತೆ ಲಾಂಗು- ಮಚ್ಚು ಸದ್ದು ಮಾಡಿದ್ದು, ಗಾಂಜಾ ನಶೆಯಲ್ಲಿ ಸಿನಿಮಾ ಶೈಲಿಯಲ್ಲಿ ಅಟ್ಯಾಕ್‌ ನಡೆದಿದೆ.

First Published Jan 23, 2023, 11:37 AM IST | Last Updated Jan 23, 2023, 11:37 AM IST

ಹುಬ್ಬಳ್ಳಿಯ ನವನಗರದ ಎಪಿಎಂಸಿ ಆವರಣದಲ್ಲಿ ತರಕಾರಿ ವ್ಯಾಪಾರಿ ಮೇಲೆ ದಾಳಿ ಮಾಡಲಾಗಿದೆ. ಅಫ್ತಾಬ್ ಹಾಗೂ ಸಂಬಂಧಿಕರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಲಾಗಿದ್ದು, ಮೌಲಾ ತಾಜು ಎಂಬುವವರ ಗುಂಪಿನಿಂದ ಕೃತ್ಯ ನಡೆದಿದೆ. ಹಲ್ಲೆಗೊಳಗಾದ ಅಫ್ತಾಬ್ ಕಿಮ್ಸ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ತರಕಾರಿ ವ್ಯಾಪಾರಿ ಅಫ್ತಾಬ್ ಪ್ರಾಣಾಪಾಯದಿಂದ ಪಾರಾಗಿದ್ದು, ನವನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Video Top Stories