Asianet Suvarna News Asianet Suvarna News

ಪ್ರವೀಣ್ ನೆಟ್ಟಾರು ಹತ್ಯೆ ಕೇಸ್: ಬೆಚ್ಚಿ ಬೀಳಿಸುತ್ತೆ ಎನ್ಐಎ ಚಾರ್ಜ್ ಶೀಟ್

ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣದ ತನಿಖೆ ನಡೆಸಿದ್ದ ಎನ್.ಐ.ಎ ತಂಡ, ನ್ಯಾಯಾಲಯಕ್ಕೆ 1,500 ಪುಟಗಳ ಚಾರ್ಜ್ ಶೀಟ್  ಸಲ್ಲಿಸಿದೆ.
 

ಬಿಜೆಪಿ ಯುವ ಮೋರ್ಚಾ ಮುಖಂಡ ಪ್ರವೀಣ್ ನೆಟ್ಟಾರು ಎಂಬಾತನನ್ನು ಬರ್ಬರವಾಗಿ ಕೊಲೆ ಮಾಡಿ ಹಂತಕರು ಎಸ್ಕೇಪ್ ಆಗಿದ್ರು. ಅವತ್ತು ನಡೆದುಹೋದ ಈ ಕೊಲೆ ಇಡೀ ದೇಶದಲ್ಲೇ ಧರ್ಮ ದಂಗಲ್ ಕಿಚ್ಚು ಹೊತ್ತಿ ಉರಿದಿತ್ತು. ಈ ಕೊಲೆಗೆ ಒಂದು ಪ್ರತಿಕಾರದ ಕೊಲೆಯೂ ನಡೆದು ಹೋಯ್ತು. ಆದ್ರೆ ಇದಾಗಿ 6 ತಿಂಗಳು ಕಳೆದಿದೆ. ಈ ಕೊಲೆ ಕೇಸ್'ನ ತನಿಖೆ ನಡೆಸಿದ್ದ ಎನ್.ಐ.ಎ ತಂಡ ನಿನ್ನೆ ಕೋರ್ಟ್'ಗೆ 1,500 ಪುಟಗಳ ಚಾರ್ಜ್ ಶೀಟ್  ಸಲ್ಲಿಸಿದೆ. ಆದ್ರೆ ಈ ಚಾರ್ಜ್ ಶೀಟ್ ಪ್ರತಿ ನಮಗೆ ಸಿಕ್ಕಿದ್ದು ಅದನ್ನು ನೋಡಿದ ನಮಗೆ ಒಂದು ಕ್ಷಣ ದಂಗು ಬಡಿದಂತಾಗಿಬಿಡ್ತು. ನೆಟ್ಟಾರು ಕೊಲೆ ಆರೋಪಿಗಳು ಪೊಲೀಸರೆದುರು ಬಾಯ್ಬಿಟ್ಟಿರುವ ಒಂದೊಂದು ಮಾಹಿತಿಗಳು ತಲೆ ತಿರುಗುವಂತೆ ಮಾಡಿತ್ತು. ಅಷ್ಟೇ ಅಲ್ಲ ಎನ್ಐಎ ತಂಡ ಕಲೆ ಹಾಕಿರುವ ಸಾಕ್ಷಿಗಳು ನಮ್ಮನ್ನು ಥಂಡಾ ಹೊಡೆಯುವಂತೆ ಮಾಡಿತ್ತು. ಏನದು? ಇಲ್ಲಿದೆ ಡಿಟೇಲ್ಸ್.

ಮಚ್ಚು ಹಿಡಿದು ತಹಶೀಲ್ದಾರ್ ಕಚೇರಿಗೆ ಎಂಟ್ರಿ: ಎದುರು ಮನೆ ಹುಡುಗನ ದ್ವೇಷದ ಕಿಚ್ಚಿಗೆ ಆಗಿದ್ದೇನು?

Video Top Stories