ತಂದೆಯನ್ನು ಬೀದಿ ಹೆಣ ಮಾಡಿದ ಪಾಪಿ: ಕೊಲೆಯ ರಹಸ್ಯ ಕೇಳಿ ಬೆಚ್ಚಿ ಖಾಕಿ ಶಾಕ್

ಮಗನೇ ತಂದೆಯ ಹೆಣ ಹಾಕಿದ್ದ. ರಿಜಿಸ್ಟ್ರಾರ್ ಆಫೀಸ್'ಗೆ ಹೋಗಲು ಮನೆ ಆಚೆ ಬಂದ ವ್ಯಕ್ತಿಯನ್ನು ಹಂತಕರು ಕೊಂದು ಮುಗಿಸಿದ್ರು. ಏನಿದು ಸ್ಟೋರಿ? ಇಲ್ಲಿದೆ ಡಿಟೇಲ್ಸ್.
 

First Published Feb 28, 2023, 3:45 PM IST | Last Updated Feb 28, 2023, 3:45 PM IST

ಆತ ರಿಯಲ್ ಎಸ್ಟೇಟ್ ಉದ್ಯಮಿ. ಬೇಜಾನ್ ದುಡ್ಡು ಸಂಪಾದಿಸಿದ್ದ. ಇದ್ದ ಮೂರು ಹೆಣ್ಣು ಮಕ್ಕಳಿಗೆ ಮದುವೆ ಮಾಡಿ ಮಗನ ಲೈಫ್ ಕೂಡ ಸೆಟ್ಲ್ ಮಾಡುವ ಕನಸು ಕಂಡಿದ್ದ. ಆದ್ರೆ ಅವತ್ತೊಂದು ದಿನ ಮನೆಯಿಂದ ಮಗನ ಜೊತೆ ಹೊರಗೆ ಹೋಗಬೇಕಾದ್ರೇನೇ ಅವನನ್ನು ಅಟ್ಯಾಕ್ ಮಾಡಿ ಕೊಂದು ಮುಗಿಸಿದ್ರು. ಮಗನ ಎದುರಲ್ಲೇ ತಂದೆಯ ಹೆಣ ಹಾಕಿದ್ರು. ಇನ್ನೂ ತನಿಖೆ ನಡೆಸಿದ ಪೊಲೀಸರಿಗೆ ವೃದ್ಧನ ಕೊಲೆಯ ಬಗ್ಗೆ ಒಂದೇ ಒಂದು ಕ್ಲೂ ಸಿಗಲಿಲ್ಲ. ಆದ್ರೆ ಸತ್ತವನ ಮಗನ ಫ್ಲಾಷ್ಬ್ಯಾಕ್ ಜಾಲಾಡಿದಾಗ ಕೊಲೆಯ ಹಿಂದಿನ ರಹಸ್ಯ ಬಯಲಾಗಿತ್ತು. ಈ ಕುರಿತು ಸಂಪೂರ್ಣ ಮಾಹಿತಿ ಈ ವಿಡಿಯೋದಲ್ಲಿದೆ‌.