ಮೂರೇ ದಿನದಲ್ಲಿ ಹಣ ಡಬಲ್ ಮಾಡಿಕೊಡ್ತಾರಂತೆ, ತಮಾಷೆಯೇ ಅಲ್ಲ ಸ್ವಾಮಿ..!
ಮೂರೇ ದಿನದಲ್ಲಿ ನಿಮ್ಮ ಹಣ ಡಬಲ್ ಮಾಡಿಕೊಡ್ತಾರಂತೆ! ಅರೇ, ಎಲ್ರಿ ಇದು..? ಏನ್ರಿ ಇದು.? ಅಂತೀರಾ. ಹೌದು ಸ್ವಾಮಿ. ಇಂತದ್ದೊಂದು ಗ್ಯಾಂಗ್ ಶಿವಮೊಗ್ಗದಲ್ಲಿದೆಯಂತೆ. ಈ ಮಾಹಿತಿ ಕವರ್ ಸ್ಟೋರಿ ತಂಡಕ್ಕೆ ಬರುತ್ತದೆ. ಸರಿ, ಅಂತ ಕವರ್ ಸ್ಟೋರಿ ಕಾರ್ಯಾಚರಣೆಗೆ ಹೊರಡುತ್ತದೆ.
ಬೆಂಗಳೂರು (ಫೆ. 27): ಮೂರೇ ದಿನದಲ್ಲಿ ನಿಮ್ಮ ಹಣ ಡಬಲ್ ಮಾಡಿಕೊಡ್ತಾರಂತೆ! ಅರೇ, ಎಲ್ರಿ ಇದು..? ಏನ್ರಿ ಇದು.? ಅಂತೀರಾ. ಹೌದು ಸ್ವಾಮಿ. ಇಂತದ್ದೊಂದು ಗ್ಯಾಂಗ್ ಶಿವಮೊಗ್ಗದಲ್ಲಿದೆಯಂತೆ. ಈ ಮಾಹಿತಿ ಕವರ್ ಸ್ಟೋರಿ ತಂಡಕ್ಕೆ ಬರುತ್ತದೆ. ಸರಿ, ಅಂತ ಕವರ್ ಸ್ಟೋರಿ ಕಾರ್ಯಾಚರಣೆಗೆ ಹೊರಡುತ್ತದೆ.
ನಮ್ಮಲ್ಲಿರುವ ಹಣವನ್ನು ಅವರಿಗೆ ಕೊಡಬೇಕಂತೆ. ಅದನ್ನು ಬಿಂದಿಗೆಯಲ್ಲಿ ಕಟ್ಟಿ, 3 ದಿನ ಇಟ್ಟು, ಮಂತ್ರಶಕ್ತಿಯಿಂದ ಆ ಹಣವನ್ನು ಡಬಲ್ ಮಾಡ್ತಾರಂತೆ. ಏನಿದು ದಂಧೆ.? ಹೇಗೆ ನಡೆಯುತ್ತೆ,.? ನಿಜನಾ ಇದು..?