ರಾತ್ರಿ ಬೆಳಗಾಗೋದ್ರೊಳಗೆ ಕೋಟ್ಯಾಧಿಪತಿ ಮಾಡ್ತಾನಂತೆ ಈ ಕಳ್ಳ ಸ್ವಾಮಿ!
ನಮ್ಮಲ್ಲಿ ಬಹತೇಕರಿಗೆ ದೇವರು, ಫೂಜೆ, ಪುನಸ್ಕಾರ ಅಂದ್ರೆ ತುಸು ಜಾಸ್ತಿಯೇ ನಂಬಿಕೆ. ಇದೇ ನಂಬಿಕೆಯನ್ನು ಬಂಡವಾಳ ಮಾಡಿಕೊಂಡಿರುವ ಕೆಲವರು ಮಾಟ, ಮಂತ್ರ ಅಂತ ಜನರಿಂದ ಸುಲಿಗೆ ಮಾಡುತ್ತಾರೆ. ಮಾಟ, ಮಂತ್ರದ ಹೆಸರಿನಲ್ಲಿ ಅದೆಷ್ಟೋ ನಕಲಿ ಸ್ವಾಮಿಗಳು ಹುಟ್ಟಿಕೊಂಡಿದ್ದಾರೆ.
ಬೆಂಗಳೂರು (ಡಿ. 26): ನಮ್ಮಲ್ಲಿ ಬಹತೇಕರಿಗೆ ದೇವರು, ಫೂಜೆ, ಪುನಸ್ಕಾರ ಅಂದ್ರೆ ತುಸು ಜಾಸ್ತಿಯೇ ನಂಬಿಕೆ. ಇದೇ ನಂಬಿಕೆಯನ್ನು ಬಂಡವಾಳ ಮಾಡಿಕೊಂಡಿರುವ ಕೆಲವರು ಮಾಟ, ಮಂತ್ರ ಅಂತ ಜನರಿಂದ ಸುಲಿಗೆ ಮಾಡುತ್ತಾರೆ. ಮಾಟ, ಮಂತ್ರದ ಹೆಸರಿನಲ್ಲಿ ಅದೆಷ್ಟೋ ನಕಲಿ ಸ್ವಾಮಿಗಳು ಹುಟ್ಟಿಕೊಂಡಿದ್ದಾರೆ. ಇಂತಹ ಸಾಕಷ್ಟು ನಕಲಿ ಸ್ವಾಮಿಗಳ ಮುಖವಾಡವನ್ನು ಕವರ್ ಸ್ಟೋರಿ ತಂಡ ಬಯಲು ಮಾಡಿದೆ.
PFI ಖಾತೆಯಲ್ಲಿ 100 ಕೋಟಿ ; ಸಿಎಎ ವಿರೋಧಿ ಪ್ರತಿಭಟನೆ, ಬೆಂಗ್ಳೂರು ಗಲಭೆಗೂ ಸಂದಾಯವಾಗಿತ್ತಾ ಹಣ?
ನಿಮ್ಮ ಕಷ್ಟಗಳೆಲ್ಲಾ ಕ್ಷಣಾರ್ಧದಲ್ಲಿ ದೂರವಾಗುತ್ತದೆ, ರಾತ್ರೋರಾತ್ರಿ ಶ್ರೀಮಂತರಾಗುತ್ತೀರಿ ಎಂದರೆ ಯಾರಿಗೆ ತಾನೆ ಆಸೆಗೆ ಬೀಳಲ್ಲ ಹೇಳಿ..! ಇಂತದ್ದೊಂದು ಗ್ಯಾಂಗ್ ಹುಟ್ಟಿಕೊಂಡಿದ್ದು ಬೀದರ್ ಜಿಲ್ಲೆಯಲ್ಲಿ. ಇಲ್ಲಿನ ಭಾಲ್ಕಿ ಪೊಲೀಸ್ ಸ್ಟೇಷನ್‌ನಲ್ಲಿ ಗುತ್ತಿಗೆ ನೌಕರನಾಗಿ ಕೆಲಸ ಮಾಡುತ್ತಿದ್ದಾನೆ. ರಾತ್ರಿಯಾದ್ರೆ ಸಾಕು ಅವತಾರ ಬದಲಾಗಿ ಬಿಡುತ್ತದೆ. ಮಾಟ, ಮಂತ್ರ ಅಂತ ಜನರನ್ನು ನಂಬಿಸಿ ವಸೂಲಿ ಮಾಡ್ತಿದ್ದ. ಕವರ್ ಸ್ಟೋರಿ ತಂಡ ಈತನ ಅವತಾರವನ್ನು ಬಯಲಿಗೆಳೆದಿದೆ.