Asianet Suvarna News Asianet Suvarna News

ಅಂಡರ್‌ವರ್ಲ್ಡ್ ಎಂಟ್ರಿಕೊಟ್ಟು ಭೂಗತ ದೊರೆಗೆ ಸ್ಕೆಚ್ ಹಾಕಿದ್ದ ಚಕ್ರೆ!

ಅಷ್ಟು ದೊಡ್ಡ ಡಾನ್ ತಲೆಯಲ್ಲಿ ನಿಜಕ್ಕೂ ಇಂತಹ ಚಿಲ್ರೆ ಐಡಿಯಾ ಬಂದಿತ್ತಾ..? ಅಂಡರ್ವರ್ಲ್ಡ್ನಲ್ಲಿ ಶತ್ರು ಯಾವಾನೇ ಆಗಿರಲಿ. ಹಾಡಹಗಲ್ಲಲ್ಲೇ ನಟ್ಟ ನಡುರಸ್ತೆಯಲ್ಲಿ ಮಚ್ಚಿನಲ್ಲಿ ಕೊಂದ್ರೆನೇ ಮರ್ಯಾದೆ. ಗುಂಡು ಹಾರಿಸಿ ಮರ್ಡರ್ಗಳನ್ನ ಮಾಡಿಸೋ ಲೆವೆಲ್ ಬೇರೆ.. ಆದ್ರೆ ತೀರ ಸೈನೇಡ್ ತಿನ್ನಿಸಿ ಮಾರಾ ಮೋಸದಲ್ಲಿ ಕೊಲ್ಲೋದು ಗಂಡಸರು ಮಾಡೋ ಕೆಲಸ ಅಲ್ಲ.. ಹಾಗಾದರೆ ಇಂದಿನ ಅಂಡರ್‌ವರ್ಲ್ಡ್ ಕತೆ ಏನು? 

ಹೇಗಾದರೂ ಮಾಡಿ ಪಾತಕ ಲೋಕಕ್ಕೆ ಎಂಟ್ರಿ ಕೊಡಬೇಕು ಅಂತ ಹಪಹಪಿಸುತ್ತಿದ್ದ ಕ್ರಿಸ್ಟೋಫರ್ ಚಕ್ರವರ್ತಿ ಅಲಿಯಾಸ್ ಚಕ್ರೆಗೆ, ಮಂಜ ಅನ್ನೋನು ಸಿಕ್ಕಿಕೊಂಡುಬಿಟ್ಟಿದ್ದ. ಆತನ ಮೇಲೆ ಮಚ್ಚು ಬೀಸಿ 307 ಕೇಸ್ನಲ್ಲಿ ಜೈಲು ಸೇರಿದ. ಇನ್ನೂ ಪಾತಕ ಲೋಕದ ಯೂನಿವರ್ಸಿಟಿಯಲ್ಲಿ ಚಕ್ರೆಗೆ ಸಿಕ್ಕಿದ್ದ ಬೆಕ್ಕಿನ ಕಣ್ಣು ರಾಜೆಂದ್ರ ಮತ್ತು ಕಾಟನ್ ಪೇಟೆ ಪುಷ್ಪ. ಅದೇಗೋ ಚಕ್ರೆ ಜೈಲಿನಲ್ಲಿದ್ದುಕೊಂಡೇ ಅವರಿಬ್ಬರ ಗೆಳೆತನ ಸಂಪಾಧಿಸಿಕೊಂಡುಬಿಟ್ಟ. ಆದ್ರೆ ಅವರುಗಳಿಗೆ ಈತ ತೀವ್ರ ಹತ್ತಿರವಾಗಿದ್ದು ಅವತ್ತೊಂದು ದಿನ ಪುಷ್ಪ ಮತ್ತು ರಾಜೆಂದ್ರನ ಊಟದಲ್ಲಿ ಸೈನೇಡ್ ಸಿಕ್ಕಿದ್ದಾಗೆ. ಅದೊಂದು ಘಟನೆಯಿಂದ ಚಕ್ರೆ ಫುಲ್ಟೈಂ ಅಂಡರ್ವರ್ಲ್ಡ್ನಲ್ಲಿ ತೊಡಗಿಕೊಂಡುಬಿಟ್ಟ. ಹೀಗೆ ಬೇಕು ಬೇಕು ಅಂತಲೇ ಭೂಗತ ಲೋಕಕ್ಕೆ ಎಂಟ್ರಿ ಕೊಟ್ಟ ಚಕ್ರೆಯ ಮುಂದುವರೆದ ಅಂಡರ್ವರ್ಲ್ಡ್ ಕಥೆಯೇ ಇವತ್ತಿನ ಚಕ್ರೆ ಹವಾ ಸ್ಟೋರಿ.

Video Top Stories