'ಎನ್ಆರ್ ರಮೇಶ್‌ಗೆ ಕನಸಿನಲ್ಲಿಯೂ ನಾನೆ ಬರ್ತೆನೆ'
* ಮಾಜಿ ಕಾರ್ಪೋರೇಟರ್ ರೇಖಾ ಕದಿರೇಶ್ ಹತ್ಯೆ ಪ್ರಕರಣ
* ರೇಖಾ ಕದಿರೇಶ್ ಅವರನ್ನು ಸಹೋದರಿ ಅಂತಾನೇ ಭಾವಿಸಿದ್ದೆ
* ಎನ್ ಆರ್ ರಮೇಶ್ ಮಾಡುತ್ತಿರುವ ಆರೋಪಗಳಲ್ಲಿ ಸತ್ಯವಿಲ್ಲ
* ಬಿಜೆಪಿಯ ಸರ್ಕಾರವೇ ಇದೆ, ಸಮಗ್ರ ತನಿಖೆಯಾಗಲಿ
ಬೆಂಗಳೂರು(ಜೂ. 24) ಬಿಬಿಎಂಪಿಯ ಮಾಜಿ ಕಾರ್ಪೋರೇಟರ್ ರೇಖಾ ಕದಿರೇಶ್ ಹತ್ಯೆಯಾಗಿದೆ. ರೇಖಾ ಕದಿರೇಶ್ ಸಹಕಾರದಲ್ಲಿ ನಾವೆಲ್ಲ ಕೆಲಸ ಮಾಡುತ್ತಿದ್ದೇವು ಎಂದು ಚಾಮರಾಜಪೇಟೆ ಶಾಸಕ ಜಮೀರ್ ಅಹಮದ್ ಖಾನ್ ಹೇಳಿದ್ದಾರೆ.
ನನ್ನ ಮೇಲೆ ಸಲ್ಲದ ಆರೋಪ ಮಾಡಲಾಗುತ್ತಿದೆ. ರೇಖಾ ಅವರನ್ನು ನನ್ನ ಸಹೋದರಿ ಎಂದು ಭಾವಿಸಿದ್ದೆ. ಎನ್ ಆರ್ ರಮೇಶ್ ಅವರಿಗೆ ಕನಸಿನಲ್ಲಿಯೂ ನಾನೇ ಬರುತ್ತಿರಬಹುದು ಎಂದಿದ್ದಾರೆ.