ಬೆಂಗಳೂರು: ಸರ ಕದ್ದು ಪರಾರಿಯಾಗುತ್ತಿದ್ದವನ ಚೇಸ್ ಮಾಡಿ ಹಿಡಿದ ಆಟೋ ಚಾಲಕ
ಸರ ಕದ್ದು ಪರಾರಿಯಾಗುತ್ತಿದ್ದವನ ಚೇಸ್ ಮಾಡಿ ಹಿಡಿದ ಆಟೋ ಚಾಲಕ/ ಪೊಲೀಶರು ಮತ್ತು ಸಾರ್ವಜನಿಕರಿಂದ ಪ್ರಶಂಸೆ/ ಸಿಸಿಟಿವಿಯಲ್ಲಿ ಸೆರೆಯಾದ ಆಟೋ ಚಾಲಕನ ಸಾಹಸ
ಬೆಂಗಳೂರು(ಡಿ. 11) ಬೆಂಗಳೂರಿನಲ್ಲಿ ಸರಗಳ್ಳರ ಹಾವಳಿ ಹೆಚ್ಚಾಗುತ್ತಿದೆ. ಮಹಿಳೆಯರು ಎಚ್ಚರಿಕೆ ವಹಿಸಲು ಪೊಲೀಸರು ಮನವಿಯನ್ನು ಮಾಡಿಕೊಂಡಿದ್ದಾರೆ. ಆದರೆ ಇಲ್ಲೊಬ್ಬರು ಆಟೋ ಚಾಲಕರು ಪೊಲೀಸರು ಮಾಡುವ ಕೆಲಸ ಮಾಡಿದ್ದಾರೆ.
ಡಿಸೆಂಬರ್ 8 ರಂದು ನಡೆದ ಘಟನಾವಳಿ ಚಿತ್ರಣ ಸಿಸಿಟಿವಿಯಲ್ಲಿ ಸರೆಯಾಗಿದ್ದು ಆಟೋ ಚಾಲಕನ ಸಾಹಸಕ್ಕೆ ಪ್ರಶಂಸೆ ವ್ಯಕ್ತವಾಗಿದೆ. ಬೆಂಗಳೂರಿನ ಮಾರತಹಳ್ಳಿಯ ಮ್ಯಾಕ್ಸ್ ಶೋ ರೂಂ ಮುಂದೆ ಮಹಿಳೆಯ ಸರ ದೋಚಿ ಪರಾರಿಯಾಗುತ್ತಿದ್ದ ಕಳ್ಳನನ್ನು ಆಟೋ ಚಾಲಕ ಚೇಸ್ ಮಾಡಿ ಹಿಡಿದಿದ್ದಾರೆ.
ಯುವಕನ ಬರ್ಬಾದ್ ಮಾಡಿದ್ದ ಟಿಕ್ ಟಾಕ್ ಆಂಟಿ ಪೊಲೀಸರ ಬಲೆಗೆ
ರಸ್ತೆಯಲ್ಲಿ ಹೋಗುತ್ತಿದ್ದ ಮಹಿಳೆಯನ್ನ ಅಡ್ಡಗಟ್ಟಿ ಚಿನ್ನದ ಸರ ಕದ್ದು ಕಳ್ಳ ಪರಾರಿಯಾಗುತ್ತಿದ್ದ. ಸ್ಥಳದಲ್ಲಿದ್ದ ಆಟೋ ಚಾಲಕನಿಂದ ಸಿನಿಮೀಯ ಶೈಲಿಯಲ್ಲಿ ಚೇಸ್ ಮಾಡಿದ್ದಾನೆ. ಕಳ್ಳನ ಬೈಕ್ ಗೆ ಆಟೋ ಡಿಕ್ಕಿ ಹೊಡೆದು ಕಳ್ಳನ ಸೆರೆ ಹಿಡಿದು ಆಟೋ ಚಾಲಕ ಪೊಲೀಸರಿಗೆ ಒಪ್ಪಿಸಿದ್ದಾನೆ. ಆಟೋಚಾಲಕ ಹನುಮಂತ ಅವರ ಸಾಹಸವನ್ನು ಜನರು ಮತ್ತು ಪೊಲೀಸರು ಶ್ಲಾಘಿಸಿದ್ದಾರೆ.
ಕೆಜಿ ಹಳ್ಳಿ ನಿವಾಸಿ ವಿಘ್ನೇಶ್ ಎಂಬಾತ ಸರ ಕಳ್ಳತನ ಮಾಡಿ ಪರಾರಿಯಾಗುತ್ತಿದ್ದ. ವೈಲ್ಟ್ ಫೀಲ್ಡ್ ಡಿಸಿಪಿ ಅನುಚೇತ್ ಅವರಿಂದ ಆಟೋಚಾಲಕನಿಗೆ ಹತ್ತು ಸಾವಿರ ಬಹುಮಾನ ನೀಡಿದ್ದಾರೆ.