Asianet Suvarna News Asianet Suvarna News

ಜಯನಗರ: ಮಲಗಿದ್ದ ನಾಯಿ ಮೇಲೆ ಕಾರು ಹತ್ತಿಸಿದ ಕಿಡಿಗೇಡಿ!

ಬೃಹತ್ ಬೆಂಗಳೂರಲ್ಲಿ ನಾಯಿಗಳ‌ ಮೇಲೆ‌ ಕಾರು ಹತ್ತಿಸುವ ಪ್ರಕರಣ ಹೆಚ್ಚಾಗುತ್ತಿವೆ. ಕಳೆದ ನಾಲ್ಕು ತಿಂಗಳಲ್ಲಿ ಮೂರನೇ ಪ್ರಕರಣ‌ ಜಯನಗರದಲ್ಲಿ ನಡೆದಿದೆ.

ಬೆಂಗಳೂರು (ಮೇ.30):  ಬೆಂಗಳೂರಲ್ಲಿ ನಾಯಿಗಳ‌ (Dog) ಮೇಲೆ‌ ಕಾರು ಹತ್ತಿಸುವ ಪ್ರಕರಣ ಹೆಚ್ಚಾಗುತ್ತಿವೆ. ಕಳೆದ ನಾಲ್ಕು ತಿಂಗಳಲ್ಲಿ ಮೂರನೇ ಪ್ರಕರಣ‌ ಜಯನಗರದಲ್ಲಿ (Jayanagar) ನಡೆದಿದೆ. ಜಯನಗರದ 9th ಬ್ಲಾಕ್‌ನಲ್ಲಿ ಮೇ. 27 ರಂದು ಮಲಗಿದ್ದ ಮತ್ತೊಂದು ಬೀದಿ ನಾಯಿ ಮೇಲೆ ಕಾರು ಹರಿಸಲಾಗಿದೆ. ಕಾರು ಹರಿದ ನಂತರ ನಾಯಿಯು ವಿಲ ವಿಲ‌ ಒದ್ದಾಡಿ ಜೀವ ಬಿಡುವುದು ಸಿಸಿಟಿವಿಯಲ್ಲಿ ಸೆರೆಯಾಗಿದೆ.ಪ್ರಕರಣದ ಕುರಿತು ಶ್ವಾನಪ್ರಿಯರಾದ ನಾಗರಾಜ್, ಹಾಗೂ ಬದ್ರೀ ಪ್ರಸಾದ್‌ ಅವರು ತಿಲಕನಗರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ರಾಕೇಶ್ ಟಿಕಾಯತ್‌ಗೆ ಮಸಿ, ಹಲ್ಲೆ: ಭಾರತ ರಕ್ಷಣಾ ವೇದಿಕೆ ಅಧ್ಯಕ್ಷ ಅರೆಸ್ಟ್

ಕಳೆದ ಫೆಬ್ರವರಿಯಲ್ಲಿ ಉದ್ಯಮಿ ಆದಿಕೇಶವಲು ಮೊಮ್ಮಗ ಆದಿ ನಾರಾಯಣ ನಾಯ್ಡು ಲಾರಾ ಎಂಬ ಶ್ವಾನದ ಮೇಲೆ ಕಾರು ಹರಿಸಿ, ಲಾರಾ ಸಾವಿಗೀಡಾಗಿತ್ತು. ಆತನ ಬಂಧನದವರೆಗೂ ಹೋರಾಟ ನಡೆದಿತ್ತು. ಹೋರಾಟವನ್ನ ನಟಿ, ಮಾಜಿ ಸಂಸದೆ ರಮ್ಯಾ ಕೂಡ ಬೆಂಬಲಿಸಿದ್ದರು. ಅದಾದ ಕೆಲವೇ ದಿನಗಳಲ್ಲಿ ಇಂತಹುದೇ ಮತ್ತೊಂದು ಪ್ರಕರಣ ನಡೆದರೂ, ಅದೃಷ್ಟವಶಾತ್ ನಾಯಿ ಬದುಕುಳಿದಿತ್ತು. ಇದೀಗ ಮೂರನೇ ಅಮಾನವೀಯ ಪ್ರಕರಣ ನಡೆದಿದೆ.

Video Top Stories