Asianet Suvarna News Asianet Suvarna News

ಕಣ್ಣಾಮುಚ್ಚಾಲೆ ಆಡೋಣ ಎಂದು ಕರೆದು ಉದ್ಯಮಿ ಮಗನ ಮೈ ಮೇಲಿದ್ದ ಚಿನ್ನಾಭರಣ ಕಳ್ಳತನ..!

ಫಂಕ್ಷನ್ ಗಳಲ್ಲಿ ಮಕ್ಕಳ ಮೈ ಮೇಲೆ ಚಿನ್ನ ಹಾಕುವ ಪೋಷಕರೇ ಎಚ್ಚರ.! ಮಕ್ಕಳನ್ನು ಯಾಮಾರಿಸಿ, ಚಿನ್ನ ಕದಿಯುತ್ತಾರೆ ಕಳ್ಳರು. ಇಲ್ಲೊಂದು ಅಂತಹದೇ ಘಟನೆ ನಡೆದಿದೆ.

ಫಂಕ್ಷನ್ ಗಳಲ್ಲಿ ಮಕ್ಕಳ ಮೈ ಮೇಲೆ ಚಿನ್ನ ಹಾಕುವ ಪೋಷಕರೇ ಎಚ್ಚರ.! ಮಕ್ಕಳನ್ನು ಯಾಮಾರಿಸಿ, ಚಿನ್ನ ಕದಿಯುತ್ತಾರೆ ಕಳ್ಳರು. ಇಲ್ಲೊಂದು ಅಂತಹದೇ ಘಟನೆ ನಡೆದಿದೆ. ಕಣ್ಣಾಮುಚ್ಚಾಲೆ ಆಡೋಣ ಬಾ ಎಂದು ಕರೆದು ಉದ್ಯಮಿ ಮಗನನ್ನು ಕರೆದು, ಆ ಮಗು ಕಣ್ಣು ಮುಚ್ಚುತ್ತಿದ್ದಂತೆ ಮೈ ಮೇಲಿದ್ದ ಚಿನ್ನಾಭರಣ ಕಳ್ಳತನ ಮಾಡಿದ್ದಾರೆ.  ಗೋವಿಂದರಾಜನಗರ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

ಉದ್ಯಮಿ‌ ರಾಘವೇಂದ್ರ ಎಂಬುವವರು ಮಾಗಡಿ ರಸ್ತೆಯ ಸರಸ್ವತಿ ಕನ್ವೆನ್ಶನ್ ಹಾಲ್‌ಗೆ ಸಂಬಂಧಿಯ ಮದುವೆಗೆ ಕುಟುಂಬ ಸಮೇತ ಬಂದಿದ್ದರು. ಈ ವೇಳೆ ಅವರ ಮಗನ ಮೈ ಮೇಲಿದ್ದ ಮೂರುವರೆ ಲಕ್ಷ ಮೌಲ್ಯದ 79 ಗ್ರಾಂ ಚಿನ್ನಾಭರಣ ಖದೀಮರು ಗಮನಿಸಿದ್ದರು.  ಕಣ್ಣಾಮುಚ್ಚಾಲೆ ಆಡೋಣ ಎಂದು ಆರು ವರ್ಷದ ಬಾಲಕ‌ನನ್ನ ಕರೆದು ಕಳ್ಳತನ ಮಾಡಿದ್ದಾರೆ.  ಚಿನ್ನ ಕದ್ದು ಇಬ್ಬರು ಬೈಕ್ ನಲ್ಲಿ ಪರಾರಿಯಾಗುತ್ತಿರುವ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದೆ.  ಗೋವಿಂದರಾಜನಗರ ಠಾಣೆಗೆ ಉದ್ಯಮಿ ರಾಘವೇಂದ್ರ  ದೂರು ನೀಡಿದ್ದಾರೆ.