ಚಿಕ್ಕಬಳ್ಳಾಪುರ: ತಂಗಿಯನ್ನ ಚುಡಾಯಿಸಿದ್ದಕ್ಕೆ ಯುವಕನ ಬರ್ಬರ ಹತ್ಯೆ
ತಂಗಿಯನ್ನು ಚುಡಾಯಿಸಿದ್ದಕ್ಕೆ ಯುವಕನೊಬ್ಬನನ್ನು ದಾರುಣವಾಗಿ ಹತ್ಯೆ ಮಾಡಿರುವ ಘಟನೆ ಚಿಕ್ಕಬಳ್ಳಾಪುರದ ಹಾರೋಬಂಡೆ ಬಳಿ ನಡೆದಿದೆ. ಯುವಕನನ್ನು 50ಕ್ಕೂ ಹೆಚ್ಚು ಬಾರಿ ಚಾಕುವಿನಿಂದ ಇರಿದು ಕೊಲ್ಲಲಾಗಿದೆ.
ಚಿಕ್ಕಬಳ್ಳಾಪುರ (ಅ.2): ತಂಗಿಯನ್ನು ಚುಡಾಯಿಸಿದ್ದಕ್ಕೆ ಯುವಕನೊಬ್ಬನನ್ನು ದಾರುಣವಾಗಿ ಹತ್ಯೆ ಮಾಡಿರುವ ಘಟನೆ ಚಿಕ್ಕಬಳ್ಳಾಪುರದ ಹಾರೋಬಂಡೆ ಬಳಿ ನಡೆದಿದೆ. ಮೃತ ಯುವಕ ಕೋಟೆ ಬಡಾವಣೆಯ ನಿವಾಸಿ ನಂದನ್ (21) ಎಂದು ಗುರುತಿಸಲಾಗಿದೆ. ದರ್ಶನ್ ಹಾಗೂ ಆತನ ಸ್ನೇಹಿತ ಆಶ್ರಯ್ ಎಂಬಿಬ್ಬರು ಯುವಕನನ್ನು 50ಕ್ಕೂ ಹೆಚ್ಚು ಬಾರಿ ಚಾಕುವಿನಿಂದ ಇರಿದು ಕೊಂದಿದ್ದಾರೆ. ದರ್ಶನ್ ತಂಗಿಯನ್ನು ನಂದನ್ ಚುಡಾಯಿಸಿದ್ದ ಇದಕ್ಕೆ ಹಲವು ಬಾರಿ ನಂದನ್ ಗೆ ದರ್ಶನ್ ಬುದ್ಧಿವಾದ ಕೂಡ ಹೇಳಿ ವಾರ್ನಿಂಗ್ ಕೊಟ್ಟಿದ್ದನಂತೆ. ಆದರೆ ನಂದನ್ ಇದನ್ನು ಲೆಕ್ಕಕ್ಕೆ ತೆಗೆದುಕೊಂಡಿರಲಿಲ್ಲ ಹೀಗಾಗಿ ಕೋಪಗೊಂಡ ದರ್ಶನ್ ತನ್ನ ಸ್ನೇಹಿತ ಆಶ್ರಯ್ ಜೊತೆ ಸೇರಿ ನಂದನ್ ನನ್ನು ಕೊಲೆ ಮಾಡಿದ್ದಾನೆ. ಈಗ ಇಬ್ಬರೂ ಆರೋಪಿಗಳು ಪೊಲೀಸರ ವಶದಲ್ಲಿದ್ದಾರೆ.