ಪೌರಕಾರ್ಮಿಕನ ಮೇಲೆ ಖಾಕಿ ದರ್ಪ; ಪ್ರಶ್ನಿಸಿದ್ದಕ್ಕೆ ಆಯ್ತು ಕಪಾಳಮೋಕ್ಷ

ಕಸ ಎತ್ತುವ ಬಿಬಿಎಂಪಿ ಪೌರ ಕಾರ್ಮಿಕರ ಮೇಲೆ ಪೊಲೀಸರು ದರ್ಪ ತೋರಿಸಿದ್ದಾರೆ. ನಡು ರಸ್ತೆಯಲ್ಲೇ ಪೌರಕಾರ್ಮಿಕನಿಗೆ ಕಪಾಳಮೋಕ್ಷ ಮಾಡಿದ್ದಾರೆ. 

First Published Dec 20, 2020, 9:38 AM IST | Last Updated Dec 20, 2020, 10:08 AM IST

ಬೆಂಗಳೂರು (ಡಿ. 20): ಕಸ ಎತ್ತುವ ಬಿಬಿಎಂಪಿ ಪೌರ ಕಾರ್ಮಿಕರ ಮೇಲೆ ಪೊಲೀಸರು ದರ್ಪ ತೋರಿಸಿದ್ದಾರೆ. ನಡು ರಸ್ತೆಯಲ್ಲೇ ಪೌರಕಾರ್ಮಿಕನಿಗೆ ಕಪಾಳಮೋಕ್ಷ ಮಾಡಿದ್ದಾರೆ. 

ಠಾಣೆ ಮುಂದೆ ಕಸದ ಗಾಡಿಗಳನ್ನು ಪೌರ ಕಾರ್ಮಿಕರು ನಿಲ್ಲಿಸಿದ್ದರು. ಅದಕ್ಕೆ ದಂಡ ಹಾಕಿದ್ದನ್ನು ಪೌರ ಕಾರ್ಮಿಕರು ಪ್ರಶ್ನಿಸಿದ್ದಕ್ಕೆ ಅವರಿಗೆ ಪೊಲೀಸರು ಕಪಾಳ ಮೋಕ್ಷ ಮಾಡಿದ್ದಾರೆ. ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಸ್ಥಳದಲ್ಲಿ ಮಾಗಡಿ ರಸ್ತೆ ಟ್ರಾಫಿಕ್ ಪೊಲೀಸರ ವರ್ತನೆಗೆ ಸಾರ್ವಜನಿಕ ಆಕ್ರೋಶ ವ್ಯಕ್ತವಾಗಿದೆ.