Asianet Suvarna News Asianet Suvarna News

ಮಗುವಿಗೆ ಮದ್ಯ ಕುಡಿಸಿ ತಾಯಿಗೆ ವಿಡಿಯೋ ಕಳಿಸಿದ ಕಿರಾತಕ ತಂದೆ..ಬೆಂಗಳೂರಿನದ್ದೇ ಪ್ರಕರಣ!

ಈತ ಅಂತಿಂಥ ವಿಕೃತನಲ್ಲ/ ಹೆತ್ತ ಮಗುವಿಗೆ ಮದ್ಯ ಕುಡಿಸಿದ ಪಾಪಿ ತಂದೆ/ ವಿಡಿಯೋ ಮಾಡಿ ತಾಯಿಗೆ ಕಳುಹಿಸಿಕೊಟ್ಟ ಕಿರಾತಕ/ ಮಗುವನ್ನು ರಕ್ಷಣೆ ಮಾಡಿದ ಪೊಲೀಸರು

ಬೆಂಗಳೂರು(ಫೆ. 04) ಈತ ಅಂತಿಂಥ  ನೀಚನಲ್ಲ. ಏನೂ ಅರಿಯದ ಕಂದಮ್ಮನಿಗೆ ಒತ್ತಾಯಪೂರ್ವಕವಾಗಿ ಮದ್ಯ ಕುಡಿಸಿದ್ದು ಅಲ್ಲದೇ ಅದರ ವಿಡಿಯೋ ಮಾಡಿ ತಾಯಿಗೆ ಕಳುಹಿಸಿಕೊಟ್ಟಿದ್ದಾನೆ.

ಇದು ಬೇರೆ ಯಾರೋ ಮಾಡಿರುವ ಕೆಲಸ ಅಲ್ಲ. ಹೆತ್ತ ತಂದೆಯೇ ಮಗುವಿಗೆ ಮದ್ಯ ಕಡುಸಿದ್ದಾನೆ.  ನಟೋರಿಯಸ್ ರೌಡಿಶೀಟರ್ ಪ್ರೇಮದ ಬಲೆಗೆ ಆಕೆ ಬಿದ್ದಿದ್ದಳು. ರೌಡಿ ಎನ್ನುವುದು ಗೊತ್ತಿಲ್ಲದೇ ಪ್ರೀತಿಸಿ ಮದುವೆಯಾಗಿ ಮಗುವಿಗೆ ಜನ್ಮ ನೀಡಿದ್ದಳು. ಗಂಡನ ಅಸಲಿ ಅವತಾರ ಗೊತ್ತಾದಾಗ ತಾಯಿ ಮನೆ ಸೇರಿ ನೆಮ್ಮದಿ ಹುಡುಕುತ್ತಿದ್ದಳು. ಅಲ್ಲಿಗೂ ಎಂಟ್ರಿ ಕೊಟ್ಟ ಕಿರಾತಕ ಮಗುವನ್ನೇ ಕದ್ದೊಯ್ದು ವಿಕೃತಿ ಮೆರೆದಿದ್ದಾನೆ.

ಓಡಿ ಹೋಗೋಣ ಬಾ... ತಾಯಿ ಹತ್ಯೆ ಮಾಡಿ ಪ್ರಿಯಕರನೊಂದಿಗೆ ಬೆಂಗಳುರು ಟೆಕ್ಕಿ ಎಸ್ಕೇಪ್

ಈ ಕಿರಾತಕನ ಹೆಸರು ಪ್ರೀತಿಸಿ ಮಾಗಡಿ ರಸ್ತೆಯ ರೌಡಿಶೀಟರ್ ಕುಮಾರೇಶ್.  ಗಂಡನ ವಿಕೃತಿ ನೋಡಿ ಮಹಿಳೆ ವನಿತಾ ಸಹಾಯವಾಣಿ‌ ಹಾಗೂ  ಮಕ್ಕಳ ಸಹಾಯವಾಣಿಗೆ ದೂರು ನೀಡಿದ್ದಾರೆ.  ಪೊಲೀಸರ ಸಹಾಯದಿಂದ ಮಗು ರಕ್ಷಣೆ ಮಾಡಲಾಗಿದೆ. 

Video Top Stories