ಬೆಂಗಳೂರಿನ ಲೇಡಿಸ್ ಪಿಜಿಗಳು ಸೇಫ್ ಅಲ್ವಾ?: ತಲ್ಲಣ ಸೃಷ್ಟಿಸಿದ ರಾಜಧಾನಿಯ ಪಿಜಿ ಮರ್ಡರ್!
ಸಿಲಿಕಾನ್ ಸಿಟಿಯ ಲೇಡಿಸ್ ಪಿಜಿಗಳು ಸೇಫ್ ಅಲ್ವಾ? ಲೇಡಿಸ್ ಪಿಜಿಗಳು ಅಸುರಕ್ಷಿತ ತಾಣವಾಗುತ್ತಿದೆಯಾ. ಅಂತಹದ್ದೊಂದು ಅನುಮಾನ ಮೂಡಿಸುವ ಘಟನೆ ಕೋರಮಂಗದಲ ಲೇಡಿಸ್ ಪಿಜಿಯಲ್ಲಿ ನಡೆದಿದೆ.
ಬೆಂಗಳೂರು (ಜು.24): ಸಿಲಿಕಾನ್ ಸಿಟಿಯ ಲೇಡಿಸ್ ಪಿಜಿಗಳು ಸೇಫ್ ಅಲ್ವಾ? ಲೇಡಿಸ್ ಪಿಜಿಗಳು ಅಸುರಕ್ಷಿತ ತಾಣವಾಗುತ್ತಿದೆಯಾ. ಅಂತಹದ್ದೊಂದು ಅನುಮಾನ ಮೂಡಿಸುವ ಘಟನೆ ಕೋರಮಂಗದಲ ಲೇಡಿಸ್ ಪಿಜಿಯಲ್ಲಿ ನಡೆದಿದೆ. ಹೌದು! ಲೇಡಿಸ್ ಪಿಜಿಗೆ ನುಗ್ಗಿ ಯುವಕನೋರ್ವ ಯುವತಿಯ ಕತ್ತು ಕೊಯ್ದು ಬರ್ಬರವಾಗಿ ಹತ್ಯೆಗೈದ ಘಟನೆ ಬೆಂಗಳೂರಿನ ಕೋರಮಂಗಲದ ವಿಆರ್ ಲೇಔಟ್‌ನಲ್ಲಿ ನಡೆದಿದೆ. ಕೃತಿ ಕುಮಾರಿ (24) ಮೃತ ಯುವತಿ. ಈಕೆ ಬಿಹಾರ ಮೂಲದವಳಾಗಿದ್ದು, ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಳು. ರಾತ್ರಿ 11:30ರ ವೇಳೆಗೆ ಘಟನೆ ನಡೆದಿದೆ. ರಾತ್ರಿ 11:10ರ ವೇಳೆಗೆ ಯುವಕ ಚಾಕು ಸಮೇತ ಪಿಜಿಯೊಳಗೆ ಬಂದಿದ್ದಾನೆ. ಮೂರನೇ ಮಹಡಿಯಲ್ಲಿರುವ ರೂಂ ಬಳಿ ಚಾಕುವಿನಿಂದ ಹಲ್ಲೆ ನಡೆಸಿದ್ದು, ಬಳಿಕ ಕತ್ತು ಕೊಯ್ದು ಹತ್ಯೆ ಮಾಡಿದ್ದಾನೆ. ಘಟನೆಯಲ್ಲಿ ಯುವತಿ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ.
ಇನ್ನು ಕೃತಿ ಕುಮಾರಿ ಪ್ರೀತಿಸುತ್ತಿದ್ದ ಯುವಕನಿಂದಲೇ ಕೊಲೆಯಾಗಿದ್ದಾಳೆ. 11:30 ಕ್ಕೆ ಕೃತಿ ಕುಮಾರಿಯೇ ಯುವಕನನ್ನ ಮೇಲ್ನೋಟಕ್ಕೆ ಕರೆದೊಯ್ಯಿರುರವ ಮಾಹಿತಿ ಸಿಕ್ಕಿದ್ದು, ಪಿಜಿಯಿಂದ ಹೊರ ಬಂದು ರಾತ್ರಿ ಊಟ ಮಾಡಿ ಕೃತಿ ಕುಮಾರಿ ಹಾಗೂ ಯುವಕ ಪಿಜಿಗೆ ವಾಪಸ್ ಆಗಿದ್ದಾರೆ. ಈ ವೇಳೆ ಕೃತಿಕುಮಾರಿಯೇ ಆತನನ್ನ ಕರೆದೊಯ್ದಿರುವ ಸಿಸಿಟಿವಿ ದೃಶ್ಯ ಪೊಲೀಸರಿಗೆ ಲಭ್ಯವಾಗಿದ್ದು, ನಂತರ ರೂಂ ನಲ್ಲಿ ಇಬ್ಬರ ಮಧ್ಯೆ ಗಲಾಟೆಯಾಗಿ ಕೊಲೆಯಾಗಿರುವ ಶಂಕೆ ವ್ಯಕ್ತವಾಗಿದೆ. ಸದ್ಯ ಆರೋಪಿಯ ಮಾಹಿತಿಯನ್ನು ಕೊರಮಂಗಲ ಪೊಲೀಸರು ಕಲೆ ಹಾಕುತ್ತಿದ್ದಾರೆ.
ಎರಡು ದಿನದ ಹಿಂದೆ ಪಿಜಿಗೆ ಸೇರಿದ್ದ ಯುವತಿ, ನಿನ್ನೆ ಲಗೇಜ್ ತೆಗೆದುಕೊಂಡು ಬಂದಿದ್ದ ಯುವಕನನ್ನ ಪಿಜಿ ಸೆಕ್ಯೂರಿಟಿ ಒಳ ಬಿಡುವುದಿಲ್ಲ ಎಂದಿದ್ದನಂತೆ. ನಂತರ ಪಿಜಿ ಸೆಕ್ಯುರಿಟಿ ಬಳಿ ನನ್ನ ಸಹೋದರ ಎಂದು ಹೇಳಿ ಬೇಗ ಕಳುಹಿಸುತ್ತೇನೆ ಎಂದು ಒಳ ಕರೆದುಕೊಂಡು ಕೃತಿ ಕುಮಾರಿ ಹೋಗಿದ್ದಳು ಎಂದು ತಿಳಿದು ಬಂದಿದೆ. ಕೋರಮಂಗಲದಲ್ಲಿ ರಾತ್ರಿ ಯುವತಿಯನ್ನ ಪಿಜಿಯಲ್ಲಿ ಕೊಲೆ ಮಾಡಲಾಗಿದೆ. ಆರೋಪಿ ಪರಾರಿಯಾಗಿದ್ದು, ಹುಡುಕಾಟ ನಡೆಸಲಾಗ್ತಿದೆ. ಬಿಹಾರ ಮೂಲದ ಯುವತಿ, ಟೆಕ್ ನಲ್ಲಿ ಕೆಲಸ ಮಾಡ್ತಿದ್ರು. ಕೊಲೆಗೆ ಕಾರಣ, ಕೊಲೆ ಮಾಡಿದವ್ರು ಯಾರು ಅನ್ನೋದು ತನಿಖೆ ಮಾಡ್ಬೇಕಿದೆ. ಪತ್ತೆಕಾರ್ಯ ನಡೀತಿದೆ. ಪಿಜಿಗಳಿಗೆ ಕೆಲ ರೂಲ್ಸ್ ಇದೆ. ಆತ ಒಳ ಹೋದ ಬಗ್ಗೆಯೂ ಪರಿಶೀಲನೆ ನಡೆಸಲಾಗ್ತಿದೆ ಎಂದು ಹೆಚ್ಚುವರಿ ಪೊಲೀಸ್ ಆಯುಕ್ತ ರಮಣ್ ಗುಪ್ತಾ ಹೇಳಿಕೆ ನೀಡಿದ್ದಾರೆ.