ಗುರು ರಾಘವೇಂದ್ರ ಬ್ಯಾಂಕ್ ವಂಚನೆ; 42 ಕೋಟಿ ಆಸ್ತಿ ಜಪ್ತಿ ಮಾಡಿ ಸುದ್ದಿ ಕೊಟ್ಟ ಇಡಿ

ಗುರು ರಾಘವೇಂದ್ರ ಕೋ ಆಪರೇಟಿವ್ ಬ್ಯಾಂಕ್ ವಂಚನೆ ಪ್ರಕರಣ/ ಆರೋಪಿಗೆ ಸೇರಿದ ಆಸ್ತಿ ಮುಟ್ಟುಗೋಲು/ ಜಾರಿ ನಿರ್ದೇಶನಾಲಯದಿಂದ ಆಸ್ತಿ ಜಪ್ತಿ

First Published Sep 18, 2020, 10:02 PM IST | Last Updated Sep 18, 2020, 10:02 PM IST

ಬೆಂಗಳೂರು(ಸೆ. 18)  ಗುರು ರಾಘವೇಂದ್ರ ಕೋ ಆಪರೇಟಿವ್ ಬ್ಯಾಂಕ್ ವಂಚನೆ ಕೇಸಿಗೆ ಸಂಬಂಧಿಸಿ ಜಾರಿ ನಿರ್ದೇಶನಾಲಯ ಆಸ್ತಿ ಜಪ್ತಿ ಮಾಡಿದೆ. ಬ್ಯಾಂಕ್ ಅಧ್ಯಕ್ಷರಾಗಿದ್ದ  ರಾಮಕೃಷ್ಣ ಸೇರಿದಂತೆ ಹಲವರ ಮೇಲೆ ಆರೋಪ ಕೇಳಿ ಬಂದಿತ್ತು.

ಠೇವಣಿದಾರರ ಹಣವನ್ನು ದುರ್ಬಳಕೆ ಮಾಡಿಕೊಂಡ ಆರೋಪ ಕೇಳಿ ಬಂದಿತ್ತು. ಇದೀಗ ತನಿಖೆ ಪ್ರಗತಿಯಲ್ಲಿದೆ. ಆರೋಪಿ ಮಯ್ಯ ರಾಮಕೃಷ್ಣ ಅವರಿಗೆ ಸೇರಿದ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಲಾಗಿದೆ.