ಮದನ್ ಭೀಕರ ಹತ್ಯೆ ದೃಶ್ಯ ಮೊಬೈಲ್‌ನಲ್ಲಿ ಸೆರೆ, ನಡುರಸ್ತೆಯಲ್ಲಿ ನಡೆದಿತ್ತು ಮರ್ಡರ್!
10 ದಿನಗಳ ಹಿಂದೆ ರಾಮಮೂರ್ತಿ ನಗರದಲ್ಲಿ ನಡೆದ ಭೀಕರ ಹತ್ಯೆಯ ಲೈವ್ ದೃಶ್ಯ ಸಾರ್ವಜನಿಕರ ಮೊಬೈಲ್‌ನಲ್ಲಿ ಸೆರೆಯಾಗಿದೆ. ನಡು ರಸ್ತೆಯಲ್ಲಿ ಮದನ್‌ನನ್ನು ಅಟ್ಟಾಡಿಸಿ ಹತ್ಯೆ ಮಾಡಲಾಗಿತ್ತು.
ಬೆಂಗಳೂರು(ಅ.22) ಮದನ್ ಅಲಿಯಾಸ್ ರಿಚರ್ಡ್ ಹತ್ಯೆ ಬೆಂಗಳೂರನ್ನೇ ಬೆಚ್ಚಿ ಬೀಳಿಸಿತ್ತು. ನಡು ರಸ್ತೆಯಲ್ಲಿ ಮದನ್ ಹತ್ಯೆಯಿಂದ ರೌಡಿಸಂ ಅಪಾಯಕಾರಿ ಮಟ್ಟಕ್ಕೆ ತಲುಪಿರುವುದು ಬಹಿರಂಗವಾಗಿತ್ತು. ಅಕ್ಟೋಬರ್ 11 ರಂದು ನಡೆದಿ ನಡೆದ ಬೀಕರ ಹತ್ಯೆ ದೃಶ್ಯಗಳು ಸಾರ್ವಜನಿಕರ ಮೊಬೈಲ್‌ನಲ್ಲಿ ಸೆರೆಯಾಗಿದೆ. ಈ ದೃಶ್ಯಗಳು ಇದೀಗ ವ್ಯಾಟ್ಸ್ಆ್ಯಪ್ ಮೂಲಕ ಹರಿದಾಡುತ್ತಿದೆ.