Asianet Suvarna News Asianet Suvarna News

ಬೆಂಗ್ಳೂರಲ್ಲಿ 300 KM ವೇಗದಲ್ಲಿ ಬೈಕ್ ಓಡಿಸಿದ ಭೂಪ ಈಗ ಪೊಲೀಸರ ಅತಿಥಿ..!

ಸಂಚಾರ ನಿಯಮವನ್ನು ಉಲ್ಲಂಘಿಸಿದ ತಪ್ಪಿಗಾಗಿ ಇದೀಗ ಬೈಕ್ ಸವಾರ ಪೊಲೀಸರ ಅತಿಥಿಯಾಗಿದ್ದಾನೆ. ಎಲೆಕ್ಟ್ರಾನಿಕ್ ಸಿಟಿಯ ಫ್ಲೈ ಓವರ್‌ ಮೇಲೆ ಬೈಕ್ ಸವಾರ ಮನಬಂದಂತೆ ಶರವೇಗದಲ್ಲಿ ಬೈಕ್ ಓಡಿಸಿದ್ದಾನೆ.

ಬೆಂಗಳೂರು(ಜು.21): ಸಾಮಾನ್ಯವಾಗಿ ಬೈಕ್‌ನಲ್ಲಿ ನಾವು ನೀವೆಲ್ಲಾ ಹೆಚ್ಚು ಅಂದ್ರೆ 100 ಕಿಲೋ ಮೀಟರ್ ವೇಗದಲ್ಲಿ ಬೈಕ್ ಓಡಿಸಿರಬಹುದು. ಆದರೆ ಬೆಂಗಳೂರಿನಲ್ಲೊಬ್ಬ ಭೂಪ ಬರೋಬ್ಬರಿ 300 ಕಿಲೋ ಮೀಟರ್ ವೇಗದಲ್ಲಿ ಬೈಕ್ ಓಡಿಸಿ ಸುದ್ದಿಯಾಗಿದ್ದಾನೆ. ಆತನನ್ನು ವಶಕ್ಕೆ ಪಡೆಯುವಲ್ಲಿ ಸಿಸಿಬಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಸಂಚಾರ ನಿಯಮವನ್ನು ಉಲ್ಲಂಘಿಸಿದ ತಪ್ಪಿಗಾಗಿ ಇದೀಗ ಬೈಕ್ ಸವಾರ ಪೊಲೀಸರ ಅತಿಥಿಯಾಗಿದ್ದಾನೆ. ಎಲೆಕ್ಟ್ರಾನಿಕ್ ಸಿಟಿಯ ಫ್ಲೈ ಓವರ್‌ ಮೇಲೆ ಬೈಕ್ ಸವಾರ ಮನಬಂದಂತೆ ಶರವೇಗದಲ್ಲಿ ಬೈಕ್ ಓಡಿಸಿದ್ದಾನೆ.

ಬುಧವಾರದಿಂದ ಬೆಂಗ್ಳೂರು ಲಾಕ್‌ಡೌನ್ ರಿಲೀಫ್; ಏನಿರತ್ತೆ..? ಏನಿರಲ್ಲ..?

300 km ಸ್ಪೀಡ್‌ನಲ್ಲಿ ಬೈಕ್ ಓಡಿಸುವ ದೃಶ್ಯಾವಳಿಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ತಕ್ಷಣ ಎಚ್ಚೆತ್ತುಕೊಂಡ ಬೆಂಗಳೂರು ಸಿಸಿಬಿ ಪೊಲೀಸರು ಆತನನ್ನು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.
 

Video Top Stories