Asianet Suvarna News Asianet Suvarna News

ಯುವಕನ ಮೇಲೆ ಹಲ್ಲೆ ಆರೋಪ: ಪೊಲೀಸ್ ಠಾಣೆಗೆ ಜೈಜಗದೀಶ್, ರಾಜಿ ಸಂಧಾನದ ಮೂಲಕ ಕೇಸ್ ಇತ್ಯರ್ಥ

ಯುವಕನ ಮೇಲೆ ಹಲ್ಲೆ ಮಾಡಿದ ಆರೋಪದಡಿಯಲ್ಲಿ ಬೆಳ್ಳೂರು ಪೊಲೀಸ್ ಠಾಣೆಗೆ ನಟ ಜೈಜಗದೀಶ್ (Jai Jagadesh) ಹಾಜರಾಗಿ ಮುಚ್ಚಳಿಕೆ ಬರೆದುಕೊಟ್ಟಿದ್ದಾರೆ. ರಾಜೀ ಸಂಧಾನ ಮೂಲಕ ಪ್ರಕರಣ ಇತ್ಯರ್ಥ ಆಗಿದೆ. 'ಸಮಸ್ಯೆಯನ್ನು ಬಗೆಹರಿಸಿಕೊಂಡಿದ್ದೇವೆ, ನಾವು ಸ್ನೇಹಿತರು, ನಮ್ಮ ನಡುವೆ ಯಾವುದೇ ಜಗಳ ಇಲ್ಲ ಎಂದು ಜೈಜಗದೀಶ್ ಹೇಳಿದ್ಧಾರೆ. 

ಬೆಂಗಳೂರು (ಜೂ. 12): ಯುವಕನ ಮೇಲೆ ಹಲ್ಲೆ ಮಾಡಿದ ಆರೋಪದಡಿಯಲ್ಲಿ ಬೆಳ್ಳೂರು ಪೊಲೀಸ್ ಠಾಣೆಗೆ ನಟ ಜೈಜಗದೀಶ್ (Jai Jagadesh) ಹಾಜರಾಗಿ ಮುಚ್ಚಳಿಕೆ ಬರೆದುಕೊಟ್ಟಿದ್ದಾರೆ. ರಾಜೀ ಸಂಧಾನ ಮೂಲಕ ಪ್ರಕರಣ ಇತ್ಯರ್ಥ ಆಗಿದೆ. 'ಸಮಸ್ಯೆಯನ್ನು ಬಗೆಹರಿಸಿಕೊಂಡಿದ್ದೇವೆ, ನಾವು ಸ್ನೇಹಿತರು, ನಮ್ಮ ನಡುವೆ ಯಾವುದೇ ಜಗಳ ಇಲ್ಲ ಎಂದು ಜೈಜಗದೀಶ್ ಹೇಳಿದ್ಧಾರೆ.

ಪಠ್ಯಪುಸ್ತಕ ವಾರ್: ಬರಗೂರು ಸಮಿತಿ ಧಾರ್ಮಿಕ ನಂಬಿಕೆಗಳಿಗೆ ಧಕ್ಕೆ ಮಾಡಿತ್ತಾ?  

ಕ್ಷುಲ್ಲಕ ವಿಚಾರಕ್ಕೆ ವ್ಯಕ್ತಿಯೊಬ್ಬನನ್ನು ಅವಾಚ್ಯ ಶಬ್ಧಗಳಿಂದ ನಿಂದಿಸಿ, ಹಲ್ಲೆ ನಡೆಸಿ, ಕೈಕಚ್ಚಿರುವ ಆರೋಪದ ಮೇಲೆ ನಟ ಜೈಜಗದೀಶ್‌ ಮತ್ತಿತರರ ವಿರುದ್ಧ ನಾಗಮಂಗಲ ತಾಲೂಕು ಬೆಳ್ಳೂರು ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿತ್ತು.  ಜೂ.5ರಂದು ಬೆಂಗಳೂರಿನಿಂದ ಸಾರಿಗೆ ಬಸ್‌ನಲ್ಲಿ ಬರುತ್ತಿರುವಾಗ ಬೆಳ್ಳೂರು ಕ್ರಾಸ್‌ನಿಂದ ಸ್ವಲ್ಪ ಹಿಂದೆ ಸುಂಕವಸೂಲಾತಿ ಕೇಂದ್ರದ ಬಳಿ ನಿಧಾನಿಸಿದಾಗ ಜಯರಾಮೇಗೌಡ ಅವರು ನಿರ್ವಾಹಕರಿಗೆ ತಿಳಿಸಿ ಬಸ್‌ನಿಂದ ಕೆಳಗಿಳಿದರು. ಈ ವೇಳೆ ಬಸ್‌ ಹಿಂದಿನಿಂದ ಬರುತ್ತಿದ್ದ ಕಾರಿನ ಚಾಲಕ ಮತ್ತು ಕಾರಿನೊಳಗಿದ್ದ ಜೈಜಗದೀಶ್‌ ಮತ್ತಿತರರು ಯಾಕೋ ಬಸ್‌ನಿಂದ ಬಾಟಲಿ ಎಸೆಯುತ್ತೀಯಾ? ಎಂದು ಅವಾಚ್ಯವಾಗಿ ನಿಂದಿಸಿ, ಬಟ್ಟೆಹರಿದು, ಕಪಾಳಕ್ಕೆ ಹೊಡೆದರು., ಹಲ್ಲಿನಿಂದ ಕೈಕಚ್ಚಿ ಹಲ್ಲೆಗೆ ಯತ್ನಿಸಿದರು ಎಂದು ಜಯರಾಮೇಗೌಡರು ದೂರು ನೀಡಿದ್ದರು. 

Video Top Stories