Asianet Suvarna FIR ಕಾಮದ ತೀಟೆ ತೀರಿಸಿಕೊಂಡ, ಮಗು ಹುಟ್ಟುವ ವೇಳೆ ಜಾತಿ ಅಡ್ಡ ತಂದ ದುರುಳ
ಉಸಿರುಗಟ್ಟಿಸಿ 7 ತಿಂಗಳ ಗರ್ಭಿಣಿ ಪತ್ನಿಯನ್ನು ಕೊಂದ ಪತಿ, ಮೃತದೇಹವನ್ನು ರಾತ್ರೋ-ರಾತ್ರಿ ಕೆರೆಗೆ ಎಸೆದಿದ್ದಾನೆ. ಮೈಸೂರು (Mysuru) ನಗರದ ಹೊರ ವಲಯ ಬೆಳವಾಡಿ ಕೆರೆಯಲ್ಲಿ ಘಟನೆ ನಡೆದಿದೆ.
ಮೈಸೂರು(ಮಾ. 24) ಆಕೆ ರಕ್ತದಲ್ಲಿನ ಕಲ್ಮಶ ಹುಡುಕಿ ವೈದ್ಯರಿಗೆ ತಿಳಿಸುವ ಲ್ಯಾಬ್ ಟೆಕ್ನಿಷಿಯನ್. ಈತನೂ ಆಸ್ಪತ್ರೆಗಳಿಗೆ ಔಷಧಿ ಸಾಗಿನೋ ವಾಹನದ ಚಾಲಕ. ಫೀಲ್ಡಲ್ಲಿ ಓಡಾಡಿಕೊಂಡಿದ್ದಾಗ ಪರಿಚಯವಾಗಿ, ಆ ಪರಿಚಯ ಪ್ರೇಮಾಂಕುರಕ್ಕೆ (Love) ಕಾರಣ ಆಗಿದೆ. ಜಾತಿ ಬೇರೆಯಾದರೇನಂತೆ ಎಂದು ಕುಟುಂಬ ಎದುರಿಸಿ ಮದುವೆಯಾದವನಿಗೆ ಮಗು ಹುಟ್ಟುವ ವೇಳೆಗೆ ಜಾತಿಯ (Caste) ಹುಳು ತಲೆ ಹೊಕ್ಕಿದೆ. ಇದೇ ಕಾರಣಕ್ಕೆ 7 ತಿಂಗಳ ಗರ್ಭಿಣಿಯನ್ನು(Pregnant) ನಿರ್ಭಯವಾಗಿ ಕೊಂದು (Murder) ಕೆರೆಗೆ ಎಸೆದಿದ್ದಾನೆ ದುರುಳ.
Child Marriage ಕೊರೋನಾ ವೇಳೆ ರಾಜ್ಯದಲ್ಲಿ 296 ಬಾಲ್ಯ ವಿವಾಹ, ದೇಶದಲ್ಲಿ ಕರ್ನಾಟಕದಲ್ಲೇ ಹೆಚ್ಚು!
ಪ್ರೀತಿ ಕುರುಡು ಆಂತಾರೆ ಓಕೆ. ಆದ್ರೆ ಸಂಸಾರ ಕಣ್ಣು ಮುಚ್ಚಿದರೆ ನಡೆದರೆ ಸಾಗದು. ಈ ದಾರುಣ ಪ್ರಕರಣದಲ್ಲೂ ಅದೇ ಆಗಿದೆ. ದೈಹಿಕ ಹಲ್ಲೆ ನಡೆಸಿ, ನಂತರ ಉಸಿರುಗಟ್ಟಿಸಿ 7 ತಿಂಗಳ ಗರ್ಭಿಣಿ ಪತ್ನಿಯನ್ನು ಕೊಂದ ಪತಿ, ಮೃತದೇಹವನ್ನು ರಾತ್ರೋ-ರಾತ್ರಿ ಕೆರೆಗೆ ಎಸೆದಿದ್ದಾನೆ. ಮೈಸೂರು (Mysuru) ನಗರದ ಹೊರ ವಲಯ ಬೆಳವಾಡಿ ಕೆರೆಯಲ್ಲಿ ಘಟನೆ ನಡೆದಿದೆ.