Asianet Suvarna News Asianet Suvarna News

ಪ್ರಜ್ವಲ್ ಬೇಟೆಗೆ ಜಾರಿಯಾಗುತ್ತಾ ರೆಡ್ ಕಾರ್ನರ್ ನೋಟಿಸ್..? ಕೋರ್ಟ್‌ನಿಂದ ಅರೆಸ್ಟ್ ವಾರಂಟ್..!

ಪ್ರಜ್ವಲ್ ರೇವಣ್ಣಗೆ ಅರೆಸ್ಟ್ ವಾರೆಂಟ್ ಮತ್ತಷ್ಟು ಸಂಕಷ್ಟ ತರಲಿದೆ. ಅಲ್ಲದೆ ಪ್ರಜ್ವಲ್ ರೇವಣ್ಣರನ್ನು ಆರ್ಥಿಕವಾಗಿ ಕಟ್ಟಿಹಾಕಲು ಎಸ್‌ಐಟಿ ಪ್ಲಾನ್ ಮಾಡಿಕೊಂಡಿದ್ದು, ಅವರ ಅಕೌಂಟ್ ಫ್ರೀಜ್ ಮಾಡುವ ಕೆಲಸ ಮಾಡಿದೆ. 

ಪ್ರಜ್ವಲ್ ರೇವಣ್ಣ (Prajwal Revanna) ವಿರುದ್ಧ ಅರೆಸ್ಟ್ ವಾರೆಂಟ್(Arrest warrant) ಜಾರಿಯಾಗಿದ್ದು, ಎಸ್‌ಐಟಿ(SIT) ಮುಂದಿನ ಕ್ರಮ ಏನು ಅನ್ನೋ ಪ್ರಶ್ನೆ ಕಾಡತೊಡಗಿದೆ. ಈ ನಡುವೆ ಪ್ರಜ್ವಲ್ ರೇವಣ್ಣಗೆ ಅರೆಸ್ಟ್ ವಾರೆಂಟ್ ಮತ್ತಷ್ಟು ಸಂಕಷ್ಟ ತರಲಿದೆ. ಅಲ್ಲದೆ ಪ್ರಜ್ವಲ್ ರೇವಣ್ಣರನ್ನು ಆರ್ಥಿಕವಾಗಿ ಕಟ್ಟಿಹಾಕಲು ಎಸ್‌ಐಟಿ ಪ್ಲಾನ್ ಮಾಡಿಕೊಂಡಿದ್ದು, ಅವರ ಅಕೌಂಟ್ ಫ್ರೀಜ್ ಮಾಡಲು ಎಲ್ಲಾ ಸಿದ್ಧತೆ ಮಾಡಿಕೊಂಡಿದೆ. ಹಾಗೆಯೇ ಪ್ರಜ್ವಲ್ ರಾಜತಾಂತ್ರಿಕ ಪಾಸ್ ಪೋರ್ಟ್ (Passport) ರದ್ಧತಿಗೆ ಕೇಂದ್ರಕ್ಕೆ ಮನವಿ ಸಹ ಮಾಡಲಾಗಿದ್ದು, ಪ್ರಜ್ವಲ್ ವಿರುದ್ಧ ರೆಡ್ ಕಾರ್ನರ್ ನೊಟೀಸ್ ಹೊರಡಿಸಲು ಎಸ್‌ಐಟಿ ರೆಡಿಯಾಗಿದೆ. ಏನಾದರೂ ಈ ನೋಟಿಸ್ ಜಾರಿಯಾದ್ರೆ ಪ್ರಜ್ವಲ್ ಬಂಧನ ಆಗುತ್ತಾ ಅನ್ನೋ ಪ್ರಶ್ನೆ ಸಹ ಇದೆ. ಈ ನಡುವೆ ಪ್ರಜ್ವಲ್ ನಾಪತ್ತೆಯಾಗಿ 24 ದಿನ ಕಳೆದಿದೆ.

ಇದನ್ನೂ ವೀಕ್ಷಿಸಿ:  ಎರಡು ಅಚ್ಚರಿಯ ವಿದಾಯ..ಕಾದಿದ್ಯಾ ಮತ್ತೊಂದು ಸರ್‌ಪ್ರೈಜ್? ಸೋಲಿನೊಂದಿಗೆ ಅಂತ್ಯವಾಯ್ತಾ ಮಹೇಂದ್ರನ ಕ್ರಿಕೆಟ್ ಬದುಕು?