Asianet Suvarna News Asianet Suvarna News

ಮತ್ತೆ ಉಗಾಂಡ ಪ್ರಜೆಗಳ ಪುಂಡಾಟ, ಕ್ಯಾಬ್ ಚಾಲಕನಿಗೆ ಚಪ್ಪಲಿಯಿಂದ ಥಳಿಸಿ ಹಲ್ಲೆ!

Sep 19, 2021, 9:25 AM IST

ಬೆಂಗಳೂರು(ಸೆ.19) ಸಿಲಿಕಾನ್ ಸಿಟಿಯಲ್ಲಿ ಮತ್ತೆ ಉಗಾಂಡ ಪ್ರಜೆಗಳ ಪುಂಡಾಟ ಮುಂದುವರೆದಿದೆ.ಮಹಿಳೆಯರು ಅಂಗಾಂಗ ತೋರಿಸಿ ವಿಕೃತಿ ಮೆರೆದಿದ್ದು, ಕ್ಯಾಬ್ ಚಾಲಕನಿಗೆ ಚಪ್ಪಲಿಯಿಂದ ಥಳಿಸಿ ಹಲ್ಲೆ ಮಾಡಿದ ಆರೋಪ ಕೇಳಿ ಬಂದಿದೆ. 

ರಾಜಾಜಿನಗರದ ನಗರದ ಖಾಸಗಿ ಹೋಟೆಲ್ ಆವರಣದಲ್ಲಿ ಈ ಗಲಾಟೆ ನಡೆದಿದೆ. ಕಾಲೇಜು ಕಾರ್ಯಕ್ರಮ ನಿಮಿತ್ತ ಹೋಟೆಲ್ ಗೆ ಬಂದಿದ್ದ ಉಗಾಂಡ ಪ್ರಜೆಗಳು, ಕಾರ್ಯಕ್ರಮ ಮುಗಿಸಿ ಹೊರಡುವಾಗ ಓಲಾ ಕ್ಯಾಬ್ ಬುಕ್ ಮಾಡಿದ್ದಾರೆ. ಸ್ಥಳಕ್ಕೆ ಬಂದ ಕ್ಯಾಬ್ ಚಾಲಕ ಓಟಿಪಿ ಪಡೆದಿದ್ದಾನೆ. ನಾಲ್ವರನ್ನು ಕೂರಿಸಿಕೊಂಡು ಹೊರಟಿದ್ದಾನೆ, ಅಷ್ಟರಲ್ಲಿ ಮತ್ತೊಬ್ಬ ಬಂದು ಕ್ಯಾಬ್ ಹತ್ತಲು ಮುಂದಾಗಿದ್ದಾನೆ. 

ಈ ವೇಳೆ ಕ್ಯಾಬ್ ಹತ್ತಲು ನಿರಾಕರಿಸಿದ ಚಾಲಕ, ಐವರನ್ನು ಕರೆದುಕೊಂಡು ಹೋಗಲು ಆಗೋದಿಲ್ಲ, ನಾಲ್ಕು ಜನರಾದರೆ ಬನ್ನಿ ಎಂದಿದ್ದಾನೆ. ಈ ವೇಳೆ ಎಲ್ಲರು ಕ್ಯಾಬ್ ನಿಂದ ಕೆಳಗೆ ಇಳಿದಿದ್ದಾರೆ. ಹೀಗಿರುವಾಗ ಕಯಾಬ್ ಚಾಲಕ ಕ್ಯಾನ್ಸಲೇಷನ್ ಚಾರ್ಜ್ 100 ರೂಪಾಯಿ ಕೇಳಿದ್ದಾನೆ. ಇದೇ ವಿಚಾರವನ್ನಿಟ್ಟುಕೊಂಡು ಗಲಾಟೆ ನಡೆಸಿದ್ದಾರೆನ್ನಲಾಗಿದೆ.