ದಿಗ್ಬಂಧನದಲ್ಲಿ ಒದ್ದಾಡುತ್ತಿದೆ ಡೆವಿಲ್ ಗ್ಯಾಂಗ್! ದಿನ ಕಳೆದ ಹಾಗೆಲ್ಲಾ ಎದ್ದುಬರುತ್ತಿವೆ ಹೊಸ ಸಾಕ್ಷಿ!

ನಟ ದರ್ಶನ್ ಅವರನ್ನು ರಕ್ಷಿಸಲು ಆತನ ಮೊದಲ ಪತ್ನಿ ವಿಜಯಲಕ್ಷ್ಮಿ ಹೋರಾಡುತ್ತಿದ್ದರೆ, ಇತ್ತ ರೇಣುಕಾಸ್ವಾಮಿ ಕೊಲೆ ಮಾಡಿದ ಗ್ಯಾಂಗ್ ವಿರುದ್ಧ ಮತ್ತಷ್ಟು ಸಾಕ್ಷಿಗಳು ಸಿಗುತ್ತಿದ್ದು, ಕಾನೂನು ಕುಣಿಕೆ ಬಿಗಿಯಾಗುತ್ತಿದೆ. 

First Published Jun 20, 2024, 4:15 PM IST | Last Updated Jun 20, 2024, 4:15 PM IST

ದರ್ಶನ್ ಪರವಾಗಿ ಆತನ ಮೊದಲನೇ ಹೆಂಡತಿ ವಿಜಯಲಕ್ಷ್ಮಿ ಹೋರಾಡ್ತಾ ಇದ್ರೆ, ಪವಿತ್ರಾ ಗೌಡ ಪರವಾಗಿ ಆಕೆಯ ಮೊದಲ ಗಂಡ ನಿಂತಿದ್ದಾರೆ.. ಆದ್ರೆ, ಈ ಇಬ್ಬರ ಹಿಂಬದಿಯಲ್ಲಿ ಕಾಣಿಸಿಕೊಳ್ತಾ ಇರೋ ಡೆವಿಲ್ ಗ್ಯಾಂಗ್ ವಿರುದ್ಧವಿರೋ ಆರೋಪಗಳು ಏನೇನು..? ರೇಣುಕಾಸ್ವಾಮಿ ಹತ್ಯೆಗೆ ಸಂಬಂಧ ಪಟ್ಟಂತೆ ಎಲ್ಲೆಲ್ಲಿ ಮಹಜರು ಮಾಡಿದ್ರು..? ಅಲ್ಲೆಲ್ಲ ಸಿಕ್ಕ ಸಾಕ್ಷಿಗಳೇನೂ? ಅಸಲಿಗೆ ದರ್ಶನ್ ಅಂಡ್ ಗ್ಯಾಂಗ್ ವಿರುದ್ಧವಿರೋ ಯಾವ ಸೆಕ್ಷನ್ ಏನು ಹೇಳುತ್ತೆ..? ಯಾವ್ಯಾವ ತಪ್ಪಿಗೆ ಏನೇನು ಶಿಕ್ಷೆ.?

ದರ್ಶನ್ ವಿರುದ್ಧ ಕೇಳಿ ಬಂದಿರೋದು ಸಣ್ಣ ಪುಟ್ಟ ಆರೋಪ ಖಂಡಿತಾ ಅಲ್ಲ. ಆ ಆರೋಪಗಳ ಪೈಕಿ ಒಂದೇ ಒಂದು ಆರೋಪ ಸಾಬೀತಾದ್ರೂ ಅದರ ಶಿಕ್ಷೆ ಸಾಮಾನ್ಯವಾಗಿರೋದಿಲ್ಲ.. ಅಷ್ಟಕ್ಕೂ ದರ್ಶನ್ ವಿರುದ್ಧ ಈ ಕೇಸಲ್ಲಿ ಸಿಕ್ಕಿರೋ ಸಾಕ್ಷಿಗಳೇನು? ಅದರ ಪರಿಣಾಮವೇನು? ರೇಣುಕಾಸ್ವಾಮಿ ಕೊಲೆ ಕೇಸಲ್ಲಿ ಡೆವಿಲ್ ಹೀರೋ ದರ್ಶನ್ ಜೈಲುವಾಸ ಅನುಭವಿಸ್ತಾ ಇದಾರೆ.. ಸಾಲು ಸಾಲು ವಿಚಾರಣೆಗಳು, ಹಲವು ಕಡೆಯ ಮಹಜರುಗಳು ಈಗಾಗ್ಲೇ ಈ ಪ್ರಕರಣವನ್ನ ಎಷ್ಟು ಸ್ಟ್ರಾಂಗ್ ಮಾಡಬಹುದೋ ಅಷ್ಟು ಬಲ ಕೊಟ್ಟಿದ್ದಾವೆ. ಇಷ್ಟೆಲ್ಲಾ ಟ್ವಿಸ್ಟುಗಳು, ಆರೋಪಗಳು, ದರ್ಶನ್ ಕೇಸಲ್ಲಿ ಎದ್ದು ಕಾಣುಸ್ತಾ ಇದಾವೆ.
ದರ್ಶನ್ ಪುಡಾಂಗ್ ಗ್ಯಾಂಗಿನ ಗ್ರಹಚಾರ ಬಿಡಸ್ತಾ ಇದೆ, ಪೊಲೀಸ್ ಪಡೆ.. ಪ್ರತಿಯೊಂದು ಸಂಗತಿನೂ ಆಳಕ್ಕಿಳಿದು ತನಿಖೆ ನಡೆಸ್ತಾ ಇದಾರೆ.. ಸಣ್ಣ ಪುಟ್ಟ ಸಾಕ್ಷಿಗಳನ್ನೂ ಘನಗಂಭೀರವಾಗಿ ಪರಿಗಣಿಸ್ತಾ ಇದಾರೆ.