
ಐಟಿ ಕಂಪನಿ ಉದ್ಯೋಗಿ, ಈಗ ಕೋಟಿ ಕೋಟಿ ಒಡತಿ! ದರ್ಶನ್ಗಾಗಿಯೇ ಗಂಡನಿಗೆ ಸೋಡಾ ಚೀಟಿ ಕೊಟ್ಟಳಾ.?
ಪವಿತ್ರಾ ಗೌಡ ಈ ಮಟ್ಟಕ್ಕೆ ಬೆಳದಿದ್ದೇಗೆ? ಆಕೆಯ ಹಿನ್ನೆಲೆ ಏನು? ಒಬ್ಬ ಸಾಮಾನ್ಯ ಮಹಿಳೆ ಕೋಟ್ಯಾಧಿಪತಿಯಾಗಿ ಬೆಳೆದ ಕಥೆಯೇ ಇವತ್ತಿನ ಎಫ್.ಐ.ಆರ್
ಅವಳು ತಲಘಟ್ಟಪುರದ ಮಧ್ಯಮವರ್ಗದ ಹುಡುಗಿಯಾಗಿದ್ದವಳು. ಆದ್ರೆ ಇವತ್ತು ಆಕೆ ರಾಜರಾಜೇಶ್ವರಿ ನಗರದ ಅಗರ್ಭ ಶ್ರೀಮಂತೆ. ಯಸ್ ನಾವು ಮಾತನ್ನಾಡ್ತಿರೋದು ಪವಿತ್ರಾ ಗೌಡ ಬಗ್ಗೆ. ಇವತ್ತು ರೇಣುಕಾಸ್ವಾಮಿಯನ್ನೋ ಅಮಾಯಕನೊಬ್ಬನ ಹೆಣ ಹಾಕಿ ಜೈಲು ಸೇರಿರುವ ಡಿಗ್ಯಾಂಗ್ನ A1 ಆರೋಪಿಯೇ ಈ ಪವಿತ್ರಾ ಗೌಡ. ಜಸ್ಟ್ 10 ವರ್ಷದ ಹಿಂದೆ ಐಟಿ ಕಂಪನಿಯಲ್ಲಿ ಕೆಲಸ ಮಾಡಿಕೊಂಡು ಒಬ್ಬ ಸಾಮಾನ್ಯ ಗೃಹಿಣಿಯಂತೆ ಜೀವನ ಮಾಡ್ತಿದ್ದ ಒಬ್ಬ ಹೆಣ್ಣುಮಗಳು ಇವತ್ತು ಕೋಟಿ ಕೋಟಿ ಆಸ್ತಿ ಹೊಂದಿದ್ದಾಳೆ. ಆಕೆಯ ಒಡೆತನದಲ್ಲಿ ಹಲವು ಉದ್ಯಮಗಳಿವೆ. ಅಷ್ಟಕ್ಕೂ ದಿಢೀರ್ ಅಂತ ಪವಿತ್ರಾ ಈ ಮಟ್ಟಕ್ಕೆ ಬೆಳದಿದ್ದೇಗೆ? ಆಕೆಯ ಹಿನ್ನೆಲೆ ಏನು? ಒಬ್ಬ ಸಾಮಾನ್ಯ ಮಹಿಳೆ ಕೋಟ್ಯಾಧಿಪತಿಯಾಗಿ ಬೆಳೆದ ಕಥೆಯೇ ಇವತ್ತಿನ ಎಫ್.ಐ.ಆರ್
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ