ಇಬ್ಬರ ನಡುವೆ ಬಂದಳೋ ಬಂದಳೋ ಪ್ರಿಯತಮೆ, ತ್ರಿಕೋನ ಪ್ರೇಮದಲ್ಲಿ ಕುಚುಕು ಗೆಳೆಯ ಅಂತ್ಯ!

ಗಂಡ ಹೆಂಡಿ ಮತ್ತು 5 ಮಕ್ಕಳು ಸೇರಿದ ಕುಟಂಬ. ಎಲ್ಲರೂ ಕೆಲಸಕ್ಕೆ ಹೋಗುತ್ತಿದ್ದರು. ಆದ್ರೆ ಆವತ್ತೊಂದು ದಿನ ನಾಲಕ್ಕನೇ ಮಗ ಕೆಲಸದಿಂದ ಬಂದು ಊಟಕ್ಕೆ ಕುಳಿತಿದ್ದ. ಇದೇ ವೇಳೆ ಬಂದ ಫೋನ್ ಕರೆಯಿಂದ ಊಟ ಅರ್ಧಕ್ಕೆ ಬಿಟ್ಟು ಹೊರಬಂದವ ದುರಂತ ಅಂತ್ಯ ಕಂಡಿದ್ದು. ಗೆಳೆಯನ ಅಂತ್ಯದ ಹಿಂದಿನ ಕರಾಳ ಸತ್ಯ ಇಲ್ಲಿದೆ.

First Published Dec 8, 2024, 12:38 PM IST | Last Updated Dec 8, 2024, 12:41 PM IST

ಇಬ್ಬರು ಒಟ್ಟಿಗೆ ಆಡಿ ಬೆಳೆದವರು.  ಆದ್ರೆ 6 ತಿಂಗಳ ಹಿಂದೆ ನಡೆದ ಮೊಹರಾಂ ಮೆರವಣಿಗೆ ಅವರಿಬ್ಬರ ಸ್ನೇಹಕ್ಕೆ ಫುಲ್​ ಸ್ಟಾಪ್​​ ಇಟ್ಟಿತ್ತು.ಇಬ್ಬರ ನಡುವೆ ಒಬ್ಬಳ ಎಂಟ್ರಿಯಾಗಿತ್ತು. ಇಬ್ಬರ ಪ್ರೀತಿಯಲ್ಲಿ ಮಿಂದಿದೆದ್ದ ಗೆಳತಿಯೇ ಗೆಳೆಯರ ದುರಂತ ಅಂತ್ಯಕ್ಕೆ ಕಾರಣವಾಗಿದ್ದಾಳೆ. ಇವರ ತ್ರಿಕೋನ ಪ್ರೇಮ ಕತೆಯ ಪುಟಗಳು ತೆರೆದುಕೊಂಡಿದ್ದು ಹೇಗೆ? ಪ್ರೀತಿಯಲ್ಲಿರುವ ಸುಖ ಈ ಮಟ್ಟಕ್ಕೆ ಹೋಗುತ್ತೆ ಅನ್ನೋದು ಊರವರಿಗೂ ಗೊತ್ತೆ ಆಗಲಿಲ್ಲ.