Asianet Suvarna News Asianet Suvarna News

Kalaburagi Crime: ಅವನು 9ನೇ ಕ್ಲಾಸ್...ಅವಳು SSLC..!ಪ್ರೀತಿಗೆ ನೋ ಅಂದಿದಕ್ಕೆ ಚಾಕು ಹಾಕಿದ..!

ಚಾಕುನಿಂದ ಇರಿದು ಕೊಲ್ಲೊ ಪ್ರಯತ್ನ ಮಾಡಿದ್ದ..!
ಅವಳಿಗೆ ಚಾಕು ಹಾಕಿ ಕ್ಲಾಸ್ನಲ್ಲಿ ಬಂದು ಕೂತಿದ್ದ..!
ಅವನ ಪ್ರೀತಿಯನ್ನ ಒಪ್ಪದೇ ಇದ್ದಿದ್ದು ತಪ್ಪಾಯ್ತು..!

ಅವನು 9ನೇ ತರಗತಿ ವಿದ್ಯಾರ್ಥಿ. ಆಟ ಪಾಠ ಅಂತ ಇರೋದು ಬಿಟ್ಟು ತನಗಿಂತ ಹಿರಿಯವಳಾದ 10ನೇ ಕ್ಲಾಸ್ ವಿದ್ಯಾರ್ಥಿನಿಯನ್ನ(Student) ಪ್ರೀತಿಸಲು ಶುರು ಮಾಡಿದ್ದ. ಆದ್ರೆ ಆ ಬಾಲಕಿ(Girl) ಇವನ ಹುಚ್ಚಾಟಕ್ಕೆ ಸರಿಯಾಗೇ ಕ್ಲಾಸ್ ತಗೆದುಕೊಂಡಿದ್ಲು. ಈತ ಮಾತ್ರ ನೀನೇ ಬೇಕು ಅಂತ ಅವಳ ಹಿಂದೆ ಬಿದ್ದಿದ್ದ. ಎಷ್ಟೇ ಗೋಗೆರೆದರು ಆಕೆ ಮಾತ್ರ ನೋ ಅನ್ನೋ ಉತ್ತರವನ್ನೇ ಕೊಟ್ಟಿದ್ಲು. ಹಾಗಾಗಿ ಅದೇ ಪಾಗಲ್ ತಾನು ಪ್ರೀತಿಸಿದವಳ(Love) ಕುತ್ತಿಗೆಗೆ ಚಾಕು ಇರಿದಿದ್ದಾನೆ. ಅಷ್ಟೇ ಅಲ್ಲ ಅವಳಿಗೆ ಚಾಕು(Knife) ಹಾಕಿ ಏನೂ ಗೊತ್ತಿಲ್ಲದಂತೆ ಶಾಲೆಗೆ ಹೋಗಿ ಪಾಠ ಕೇಳುತ್ತಾ ಕೂತಿದ್ದಾನೆ. ಇವತ್ತಿನ ಶಾಲಾ ಮಕ್ಕಳ ಮನಸ್ಥಿತಿಗೆ ಇದು ಕೈಗನ್ನಡಿಯಾಗಿದೆ. ಸಾಮಾಜಿಕ ಜಾಲ ತಾಣಗಳು ಮಕ್ಕಳ ಮನಸ್ಸನ್ನು ಹಾಳು ಮಾಡುತ್ತಿವೆ. ಇದನ್ನು ತಡೆದು ಒಳ್ಳೆಯ ಸಂಸ್ಕಾರ ಕೊಡುವಲ್ಲಿ ಪೋಷಕರು ಮತ್ತು ಶಾಲೆಗಳೂ ವಿಫಲವಾಗುತ್ತಿವೆ. ಇದರ ಪರಿಣಾಮವೇ ಇವತ್ತಿನಂತಹ ಘಟನೆಗಳು ಹೆಚ್ಚುತ್ತಿರುವುದು.

ಇದನ್ನೂ ವೀಕ್ಷಿಸಿ: ನೆಹರು ಪರಿವಾರಕ್ಕೂ..ಬಚ್ಚನ್ ಕುಟುಂಬಕ್ಕೂ.. ಎಂಥಾ ನಂಟು..? ಹೇಗಿತ್ತು ಗೊತ್ತಾ ರಾಜೀವ್ ಗಾಂಧಿ-ಅಮಿತಾಭ್ ಗೆಳೆತನ?

Video Top Stories