KIADB ಹಗರಣ 40 ಕೋಟಿ ಲೂಟಿ..! ಒಂದೇ ಭೂಮಿಗೆ ಎರಡೆರಡು ಬಾರಿ ಪರಿಹಾರ ಹಂಚಿಕೆ..!
KIADBಯಲ್ಲಿ ವಾಲ್ಮೀಕಿ ನಿಗಮ ಮಾದರಿಯಲ್ಲೇ ಹಗರಣ ನಡೆದಿದೆ ಎಂಬ ಆರೋಪ ಕೇಳಿಬಂದಿದ್ದು, ಇದೀಗ ಇಡಿ ಎಂಟ್ರಿಯಾಗಿದೆ.
ವಾಲ್ಮೀಕಿ ನಿಗಮದ ಬಳಿಕ ಮತ್ತೊಂದು ಹಗರಣ ಬೆಳಕಿಗೆ ಬಂದಿದೆ. KIADBಯಲ್ಲಿ ವಾಲ್ಮೀಕಿ ನಿಗಮ ಮಾದರಿಯಲ್ಲೇ ಹಗರಣ( Valmiki Corporation scam) ನಡೆದಿದೆ ಎಂಬ ಆರೋಪ ಕೇಳಿಬಂದಿದೆ. ಈ ಪ್ರಕರಣಕ್ಕೆ ಇದೀಗ ಇಡಿ(ED) ಎಂಟ್ರಿಯಾಗಿದೆ. 2012ರಲ್ಲಿ ಧಾರವಾಡದ(Dharwad)ಕೋಟೂರ ಗ್ರಾಮದಲ್ಲಿ KIADB ಭೂಸ್ವಾಧೀನ (KIADB Land Acquisition) ಮಾಡಿಕೊಂಡಿದೆ. ಸರ್ವೆ ನಂಬರ್ 635 ರಲ್ಲಿರುವ 2 ಎಕರೆ 6 ಗುಂಟೆ ಜಮೀನು ವಶಕ್ಕೆ ಪಡೆಯಲಾಗಿದೆ. ಮಾಲೀಕ ಇಮಾಮ್ ಸಾಬ್ ಶಿರೂರಗೆ 64,50,000 ಪರಿಹಾರ ನೀಡಿದ್ದು, 13-11-2018 ರಂದು ಇಮಾಮ್ ಸಾಬ್ ಶಿರೂರಗೆ ಪರಿಹಾರ ನೀಡಲಾಗಿದೆ. ಪುನಃ ಇದೇ ಜಮೀನಿಗೆ ಒಟ್ಟು 65,50000 ಹಣ ಟ್ರಾನ್ಸ್ಫರ್ ಮಾಡಲಾಗಿದೆ. ಇಮಾಮ್ ಸಾಬ್ ಪುತ್ರ ಮೆಹಬೂಬ್ ಶಿರೂರುಗೆ ಪರಿಹಾರ ನೀಡಲಾಗಿದೆ. 30-04-2022 ರಂದು ಮೆಹಬೂಬ್ ಹೆಸರಲ್ಲಿ ನಕಲಿ ಬ್ಯಾಂಕ್ ಓಪನ್ ಮಾಡಲಾಗಿತ್ತು. ನಕಲಿ ಖಾತೆ ಓಪನ್ ಮಾಡಿ 64250100003462 RTGS ಹಣ ರವಾನಿಸಿ ಲೂಟಿ ಮಾಡಲಾಗಿದೆ. ಹೀಗೆ ಬೇರೆ ಬೇರೆ ರೈತರ ಹೆಸರಲ್ಲಿ ನಕಲಿ ಖಾತೆ ತೆರೆದು ಹಣ ಲೂಟಿ ಮಾಡಲಾಗಿದೆ.
ಇದನ್ನೂ ವೀಕ್ಷಿಸಿ: ಟ್ರಂಪ್ ತಲೆಗೆ ಗುರಿ ಇಟ್ಟವನೇ ಕ್ಷಣದಲ್ಲಿ ಹೆಣವಾದ: ಅಮೆರಿಕಾ ಮಾಜಿ ಅಧ್ಯಕ್ಷರ ಮೇಲೆ ನಡೆದ ದಾಳಿ ಹಿಂದಿನ ಕಾರಣವೇನು ?