Asianet Suvarna News Asianet Suvarna News

39 ಎಸೆತಗಳಲ್ಲಿ 105 ರನ್‌ ಚಚ್ಚಿದ ಹಾರ್ದಿಕ್ ಪಾಂಡ್ಯ!

ಡಿ.ವೈ.ಪಾಟೀಲ್‌ ಟಿ20 ಕಪ್‌ನಲ್ಲಿ ಮಂಗಳವಾರ ರಿಲಾಯನ್ಸ್‌ 1 ತಂಡದ ಪರ ಹಾರ್ದಿಕ್ ಪಾಂಡ್ಯ 39 ಎಸೆತಗಳಲ್ಲಿ 105 ರನ್‌ ಸಿಡಿಸಿದರು. ಬೆನ್ನಿನ ಶಸ್ತ್ರಚಿಕಿತ್ಸೆ ನಂತರ ಕಳೆದ ವಾರ ಸ್ಪರ್ಧಾತ್ಮಕ ಕ್ರಿಕೆಟ್‌ಗೆ ವಾಪಸಾದ ಪಾಂಡ್ಯ,ಸಿಎಜಿ ತಂಡದ ವಿರುದ್ಧ 8 ಬೌಂಡರಿ ಹಾಗೂ 10 ಸಿಕ್ಸರ್‌ ಸಿಡಿಸಿದರು. ಅವರ ಸ್ಫೋಟಕ ಆಟದ ನೆರವಿನಿಂದ ರಿಲಾಯನ್ಸ್‌ ತಂಡ 101 ರನ್‌ ಗೆಲುವು ಸಾಧಿಸಿತು. 

First Published Mar 4, 2020, 12:44 PM IST | Last Updated Mar 4, 2020, 12:44 PM IST

ನವಿ ಮುಂಬೈ(ಮಾ.04): ಗಾಯದಿಂದ ಚೇತರಿಸಿಕೊಂಡಿರುವ ಭಾರತ ತಂಡದ ಆಲ್ರೌಂಡರ್‌ ಹಾರ್ದಿಕ್‌ ಪಾಂಡ್ಯ ಮುಂಬರುವ ಐಪಿಎಲ್‌ ಟೂರ್ನಿಗೆ ಭರ್ಜರಿ ಸಿದ್ಧತೆ ನಡೆಸಿದ್ದಾರೆ. 

IPL 2020: ಚೆನ್ನೈ ಸೂಪರ್‌ ಕಿಂಗ್ಸ್‌ನಿಂದ ಧೋನಿಗೆ ಅದ್ಭುತ ಸ್ವಾಗತ, ವಿಡಿಯೋ ವೈರಲ್

ಇಲ್ಲಿ ನಡೆಯುತ್ತಿರುವ ಡಿ.ವೈ.ಪಾಟೀಲ್‌ ಟಿ20 ಕಪ್‌ನಲ್ಲಿ ಮಂಗಳವಾರ ರಿಲಾಯನ್ಸ್‌ 1 ತಂಡದ ಪರ 39 ಎಸೆತಗಳಲ್ಲಿ 105 ರನ್‌ ಸಿಡಿಸಿದರು. ಬೆನ್ನಿನ ಶಸ್ತ್ರಚಿಕಿತ್ಸೆ ನಂತರ ಕಳೆದ ವಾರ ಸ್ಪರ್ಧಾತ್ಮಕ ಕ್ರಿಕೆಟ್‌ಗೆ ವಾಪಸಾದ ಪಾಂಡ್ಯ,ಸಿಎಜಿ ತಂಡದ ವಿರುದ್ಧ 8 ಬೌಂಡರಿ ಹಾಗೂ 10 ಸಿಕ್ಸರ್‌ ಸಿಡಿಸಿದರು. ಅವರ ಸ್ಫೋಟಕ ಆಟದ ನೆರವಿನಿಂದ ರಿಲಾಯನ್ಸ್‌ ತಂಡ 101 ರನ್‌ ಗೆಲುವು ಸಾಧಿಸಿತು. 

ಟೀಂ ಇಂಡಿಯಾದ ತ್ರಿಮೂರ್ತಿಗಳು ಕಮ್‌ಬ್ಯಾಕ್ ಮಾಡೋದು ಯಾವಾಗ..?

ಹಾರ್ದಿಕ್‌ ಆಟವನ್ನು ಭಾರತ ತಂಡದ ಆಯ್ಕೆಗಾರ ಎಂ.ಎಸ್‌.ಕೆ.ಪ್ರಸಾದ್‌ ವೀಕ್ಷಿಸಿದರು. ಮುಂದಿನ ವಾರ ಆರಂಭಗೊಳ್ಳಲಿರುವ ದ.ಆಫ್ರಿಕಾ ವಿರುದ್ಧದ ಏಕದಿನ ಸರಣಿಗೆ ಪಾಂಡ್ಯ ಭಾರತ ತಂಡದಲ್ಲಿ ಸ್ಥಾನ ಪಡೆಯುವ ಸಾಧ್ಯತೆ ಇದೆ.

Video Top Stories