Asianet Suvarna News Asianet Suvarna News

ಕೊಹ್ಲಿ ಚೊಚ್ಚಲ ಏಕದಿನ ಶತಕ; ದಶಕದ ಸಂಭ್ರಮದಲ್ಲಿ ಭಾರತ!

ಡಿಸೆಂಬರ್ 24, 2009ರಂದು ಟೀಂ ಇಂಡಿಯಾ ನಾಯಕರಾಗಿರುವ ವಿರಾಟ್ ಕೊಹ್ಲಿ ಏಕದಿನ ಕ್ರಿಕೆಟ್’ನಲ್ಲಿ ಚೊಚ್ಚಲ ಶತಕ ಬಾರಿಸಿದ್ದರು.

ಶ್ರೀಲಂಕಾ ವಿರುದ್ಧ ಈಡನ್ ಗಾರ್ಡನ್ಸ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ವಿರಾಟ್ ಕೊಹ್ಲಿ 107 ರನ್ ಬಾರಿಸಿದ್ದರು. ಮೊದಲು ಬ್ಯಾಟಿಂಗ್ ಮಾಡಿದ ಶ್ರೀಲಂಕಾ 315 ರನ್ ಬಾರಿಸಿತ್ತು. ಪ್ರವಾಸಿ ತಂಡದ ಉಫುಲ್ ತರಂಗಾ 118 ರನ್ ಬಾರಿಸಿದ್ದರು.

ಡಿಸೆಂಬರ್ 24, 2009ರಂದು ಟೀಂ ಇಂಡಿಯಾ ನಾಯಕರಾಗಿರುವ ವಿರಾಟ್ ಕೊಹ್ಲಿ ಏಕದಿನ ಕ್ರಿಕೆಟ್’ನಲ್ಲಿ ಚೊಚ್ಚಲ ಶತಕ ಬಾರಿಸಿದ್ದರು.

ICC ಟೆಸ್ಟ್ ರ‍್ಯಾಂಕಿಂಗ್ ಪ್ರಕಟ; ಅಗ್ರಸ್ಥಾನ ಕಾಯ್ದುಕೊಂಡ ಕೊಹ್ಲಿ!.

ಶ್ರೀಲಂಕಾ ವಿರುದ್ಧ ಈಡನ್ ಗಾರ್ಡನ್ಸ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ವಿರಾಟ್ ಕೊಹ್ಲಿ 107 ರನ್ ಬಾರಿಸಿದ್ದರು. ಮೊದಲು ಬ್ಯಾಟಿಂಗ್ ಮಾಡಿದ ಶ್ರೀಲಂಕಾ 315 ರನ್ ಬಾರಿಸಿತ್ತು. ಪ್ರವಾಸಿ ತಂಡದ ಉಫುಲ್ ತರಂಗಾ 118 ರನ್ ಬಾರಿಸಿದ್ದರು.

IPL ಹರಾಜಿನ ಬೆನ್ನಲ್ಲೇ ಉಳಿದ ತಂಡಗಳಿಗೆ ಎಚ್ಚರಿಕೆ ಕೊಟ್ಟ ಕೊಹ್ಲಿ!

316 ರನ್ ಗಳ ಗುರಿ ಬೆನ್ನತ್ತಿದ ಭಾರತ ಆರಂಭಿಕ ಉತ್ತಮ ಆರಂಭ ಪಡೆಯುವಲ್ಲಿ ವಿಫಲವಾಯಿತು. ತಂಡದ ಮೊತ್ತ 23 ರನ್ ಗಳಾಗುವಷ್ಟರಲ್ಲಿ ವಿರೇಂದ್ರ ಸೆಹ್ವಾಗ್ ಹಾಗೂ ಸಚಿನ್ ತೆಂಡುಲ್ಕರ್ ಪೆವಿಲಿಯನ್ ಸೇರಿದ್ದರು.
ಆ ಬಳಿಕ ಜತೆಯಾಟ ವಿರಾಟ್ ಕೊಹ್ಲಿ-ಗೌತಮ್ ಗಂಭೀರ್ ಜೋಡಿ 224 ರನ್’ಗಳ ಜತೆಯಾಟವಾಡುವ ಮೂಲಕ ತಂಡವನ್ನು ಸುಸ್ಥಿತಿಗೆ ಕೊಂಡ್ಯೊಯ್ದರು.

ಮಕ್ಕಳಿಗಾಗಿ ಸಾಂತಾ ಕ್ಲಾಸ್ ಆದ ವಿರಾಟ್ ಕೊಹ್ಲಿ!.

ವಿರಾಟ್ ಕೊಹ್ಲಿ 107 ರನ್ ಬಾರಿಸಿ ವಿಕೆಟ್ ಒಪ್ಪಿಸಿದರೆ, ಗೌತಮ್ ಗಂಭೀರ್ 150 ರನ್ ಬಾರಿಸಿ ಅಜೇಯರಾಗುಳಿದರು. ಪಂದ್ಯವನ್ನು ಭಾರತ 7 ವಿಕೆಟ್ ಅಂತರದ ಜಯ ದಾಖಲಿಸಿತ್ತು.

ಕೊಹ್ಲಿ ಪ್ರಸ್ತುತ ಏಕದಿನ ಕ್ರಿಕೆಟ್ ಮಾದರಿಯಲ್ಲಿ 43 ಶತಕ ಬಾರಿಸಿದ್ದಾರೆ. 2019ರಲ್ಲಿ ಏಕದಿನ ಮಾದರಿಯಲ್ಲಿ ಎರಡನೇ ಗರಿಷ್ಠ ರನ್ ಸರದಾರರಾಗಿ ಹೊರಹೊಮ್ಮಿದ್ದಾರೆ. ಈ ವರ್ಷ ಕೊಹ್ಲಿ 1,377 ರನ್ ಬಾರಿಸಿದ್ದು, ಸಹ ಆಟಗಾರ ರೋಹಿತ್ ಶರ್ಮಾ’ಗಿಂತ ಹಿಂದಿದ್ದಾರೆ.

ಇದೇ ವರ್ಷ ಧೋನಿ ಹಿಂದಿಕ್ಕಿ ಭಾರತ ಪರ ಯಶಸ್ವಿ ಟೆಸ್ಟ್ ನಾಯಕನಾಗಿ ಹೊರಹೊಮ್ಮಿದ್ದಾರೆ.

ಕೊಹ್ಲಿ ನಾಯಕತ್ವದಲ್ಲಿ ಭಾರತ ತಂಡವು ವೆಸ್ಟ್ ಇಂಡೀಸ್ ವಿರುದ್ಧ ಸತತ 10ನೇ ಏಕದಿನ ಸರಣಿ ಜಯಿಸಿದ ಸಾಧನೆ ಮಾಡಿತು. ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಟೀಂ ಇಂಡಿಯಾ 2-1 ಅಂತರದಲ್ಲಿ ಪ್ರವಾಸಿ ಪಡೆಯನ್ನು ಮಣಿಸಿದೆ.