ಕಿವೀಸ್ ಟೆಸ್ಟ್ ಸರಣಿ ಮಯಾಂಕ್‌ಗೆ ಅಗ್ನಿ ಪರೀಕ್ಷೆ

ನ್ಯೂಜಿಲೆಂಡ್ ಎದುರಿನ ಟೆಸ್ಟ್ ಸರಣಿ ಮಯಾಂಕ್ ಅಗರ್‌ವಾಲ್ ಪಾಲಿಗೆ ಅಗ್ನಿ ಪರೀಕ್ಷೆ ಆಗಲಿದೆ. ಈಗಾಗಲೇ ಕಿವೀಸ್ ಪ್ರವಾಸದಲ್ಲಿ ರನ್ ಬರ ಅನುಭವಿಸುತ್ತಿರುವ ಮಯಾಂಕ್, ಟೆಸ್ಟ್ ಸರಣಿಯಲ್ಲಿ ಹೇಗೆ ಆಡಲಿದ್ದಾರೆ ಎನ್ನುವುದನ್ನು ಕಾದು ನೋಡಬೇಕಿದೆ.

First Published Feb 17, 2020, 5:54 PM IST | Last Updated Feb 17, 2020, 5:54 PM IST

ವೆಲ್ಲಿಂಗ್ಟನ್(ಫೆ.17): ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ದಿನದಿಂದ ಗಮನಾರ್ಹ ಪ್ರದರ್ಶನ ನೀಡುತ್ತಾ ಬಂದಿದ್ದ ಮಯಾಂಕ್ ಅಗರ್‌ವಾಲ್ ಸದ್ಯ ರನ್ ಬರ ಅನುಭವಿಸುತ್ತಿದ್ದಾರೆ. 2019ರಲ್ಲಿ ಅಬ್ಬರಿಸಿದ್ದ ಅಗರ್‌ವಾಲ್, 2020ರಲ್ಲಿ ಫುಲ್ ಸೈಲೆಂಟ್ ಆಗಿದ್ದಾರೆ.

ಸಚಿನ್ - ಸೆಹ್ವಾಗ್ ಆರಂಭಿಕರಾಗಿ ಕಣಕ್ಕೆ: ದಿಗ್ಗಜ ಕ್ರಿಕೆಟಿಗರಿಂದ ಮತ್ತೊಂದು ಸರಣಿ!

ಹೌದು, ಆಸ್ಟ್ರೇಲಿಯಾ ಪ್ರವಾಸದಲ್ಲಿ ಅಂತಾರಾಷ್ಟ್ರೀಯ ಟೆಸ್ಟ್ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದ ಮಯಾಂಕ್ ಆ ಬಳಿಕ ಹಿಂತಿರುಗಿ ನೋಡಿರಲಿಲ್ಲ. ನಂತರದ ಟೆಸ್ಟ್‌ ಸರಣಿಯಲ್ಲೂ ಅಮೋಘ ಪ್ರದರ್ಶನ ನೀಡುವ ಮೂಲಕ ಬಿಸಿಸಿಐ ನೀಡುವ ಉತ್ತಮ ಅಂತಾರಾಷ್ಟ್ರೀಯ ಡೆಬ್ಯೂ ಕ್ರಿಕೆಟಿಗ ಪ್ರಶಸ್ತಿಯನ್ನು ಬಾಚಿಕೊಂಡಿದ್ದರು.

ಚೊಚ್ಚಲ ಪಂದ್ಯದಲ್ಲಿ ದಾಖಲೆ ಬರೆದ ಮಯಾಂಕ್-ಪೃಥ್ವಿ

ಆದರೆ ನ್ಯೂಜಿಲೆಂಡ್ ವಿರುದ್ಧದ ಪ್ರವಾಸದಲ್ಲಿ ರನ್ ಬರ ಅನುಭವಿಸುತ್ತಿದ್ದಾರೆ. ನ್ಯೂಜಿಲೆಂಡ್ ವಿರುದ್ಧವೇ ಏಕದಿನ ಸರಣಿಯಲ್ಲಿ ಸೀಮಿತ ಓವರ್‌ಗಳ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದ ಮಯಾಂಕ್ ನಿರೀಕ್ಷಿತ ಪ್ರದರ್ಶನ ನೀಡುವಲ್ಲಿ ವಿಫಲವಾಗಿದ್ದರು. ಇನ್ನು ಮುಂಬರುವ 2 ಪಂದ್ಯಗಳ ಟೆಸ್ಟ್ ಚಾಂಪಿಯನ್‌ಶಿಪ್ ಮಯಾಂಕ್ ಪಾಲಿಗೆ ಅಗ್ನಿ ಪರೀಕ್ಷೆಯ ಸರಣಿಯಾಗಲಿದೆ. ಈ ಕುರಿತಾದ ವಿವರ ಇಲ್ಲಿದೆ ನೋಡಿ..