ICC ಟೆಸ್ಟ್ ಚಾಂಪಿಯನ್‌ಶಿಪ್: ಭಾರತದ ನಂ.1 ಸ್ಥಾನ ಅಬಾಧಿತ

ಭಾರತ 9 ದೇಶಗಳನ್ನೊಳಗೊಂಡ ಟೆಸ್ಟ್ ಚಾಂಪಿಯನ್’ಶಿಪ್’ನಲ್ಲಿ ಇದುವರೆಗೂ ಒಂದು ಅಂಕವನ್ನು ಬಿಟ್ಟುಕೊಟ್ಟಿಲ್ಲ. ಭಾರತ ವೆಸ್ಟ್ ಇಂಡೀಸ್ ಎದುರು 2-0, ದಕ್ಷಿಣ ಆಫ್ರಿಕಾ ವಿರುದ್ಧ ತವರಿನಲ್ಲಿ ನಡೆದ ಸರಣಿಯಲ್ಲಿ 3-0, ಕೋಲ್ಕತಾದಲ್ಲಿ ನಡೆದ ಈಡನ್ ಗಾರ್ಡನ್ಸ್ ಮೈದಾನದಲ್ಲಿ ನಡೆದ ಹಗಲು-ರಾತ್ರಿ ಟೆಸ್ಟ್ ಪಂದ್ಯವನ್ನು ಗೆಲ್ಲುವ ಮೂಲಕ ಸತತ ಮೂರು ಸರಣಿಯನ್ನು ಕ್ಲೀನ್ ಸ್ವೀಪ್ ಮಾಡಿದೆ.

First Published Nov 27, 2019, 7:20 PM IST | Last Updated Nov 27, 2019, 7:21 PM IST

ಬಾಂಗ್ಲಾದೇಶ ವಿರುದ್ದ 2-0 ಅಂತರದಲ್ಲಿ ಟೆಸ್ಟ್ ಸರಣಿ ಗೆಲ್ಲುವುದರೊಂದಿಗೆ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್’ಶಿಪ್’ನಲ್ಲಿ ಭಾರತ 360 ಗಳಿಸಿದೆ. ಇದರೊಂದಿಗೆ ಭಾರತ ಅಗ್ರಸ್ಥಾನವನ್ನು ಮತ್ತಷ್ಟು ಭದ್ರಪಡಿಸಿಕೊಂಡಿದೆ.

ICC ರ‍್ಯಾಂಕಿಂಗ್‌ ಪ್ರಕಟ; ಟಾಪ್ 10 ಪಟ್ಟಿಯಲ್ಲಿ ಮಯಾಂಕ್ ಅಗರ್ವಾಲ್!

ಭಾರತ 9 ದೇಶಗಳನ್ನೊಳಗೊಂಡ ಟೆಸ್ಟ್ ಚಾಂಪಿಯನ್’ಶಿಪ್’ನಲ್ಲಿ ಇದುವರೆಗೂ ಒಂದು ಅಂಕವನ್ನು ಬಿಟ್ಟುಕೊಟ್ಟಿಲ್ಲ. ಭಾರತ ವೆಸ್ಟ್ ಇಂಡೀಸ್ ಎದುರು 2-0, ದಕ್ಷಿಣ ಆಫ್ರಿಕಾ ವಿರುದ್ಧ ತವರಿನಲ್ಲಿ ನಡೆದ ಸರಣಿಯಲ್ಲಿ 3-0, ಕೋಲ್ಕತಾದಲ್ಲಿ ನಡೆದ ಈಡನ್ ಗಾರ್ಡನ್ಸ್ ಮೈದಾನದಲ್ಲಿ ನಡೆದ ಹಗಲು-ರಾತ್ರಿ ಟೆಸ್ಟ್ ಪಂದ್ಯವನ್ನು ಗೆಲ್ಲುವ ಮೂಲಕ ಸತತ ಮೂರು ಸರಣಿಯನ್ನು ಕ್ಲೀನ್ ಸ್ವೀಪ್ ಮಾಡಿದೆ.  

ಪಿಂಕ್ ಬಾಲ್‌ ಟೆಸ್ಟ್ ಯಶಸ್ವಿ ಬೆನ್ನಲ್ಲೆ ಅಚ್ಚರಿಯ ಹೇಳಿಕೆ ನೀಡಿದ ದಾದಾ

ಪ್ರತಿ ಸರಣಿಯು 120 ಅಂಕಗಳನ್ನು ಒಳಗೊಂಡಿದ್ದು, ಸರಣಿಯಲ್ಲಿ ಪಂದ್ಯಗಳಿಗನುಗುಣವಾಗಿ ಅಂಕಗಳನ್ನು ಹಂಚಿಕೆ ಮಾಡಲಾಗುತ್ತದೆ. ವಿಶ್ವ ಟೆಸ್ಟ್ ಚಾಂಪಿಯನ್’ಶಿಪ್ ಟೂರ್ನಿಯ ಅಂತ್ಯದ ವೇಳೆಗೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಗಳಿಸುವ 2 ತಂಡಗಳು ಇಂಗ್ಲೆಂಡ್’ನ ಲಾರ್ಡ್ಸ್’ನಲ್ಲಿ ಜೂನ್ 2021ರಂದು ನಡೆಯಲಿರುವ ಫೈನಲ್’ನಲ್ಲಿ ಸೆಣಸಲಿವೆ. ಈ ಪಂದ್ಯದ ವಿಜೇತ ತಂಡವು ವಿಶ್ವ ಟೆಸ್ಟ್ ಚಾಂಪಿಯನ್’ಶಿಪ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಳ್ಳಲಿದೆ. 
 
Video Top Stories