Asianet Suvarna News Asianet Suvarna News

ಗ್ರಾಹಕರೇ ಹುಷಾರಾಗಿರಿ; ಬ್ಯಾಂಕ್ ಲಾಕರ್‌ನಲ್ಲಿರುವ ಚಿನ್ನಾಭರಣ ಸೇಫ್‌ ಅಲ್ಲ..!

ಬೆಂಗಳೂರಿನ ಜಯನಗರ ಶಾಖೆಯ ಬ್ಯಾಂಕ್ ಆಫ್ ಬರೋಡದಲ್ಲಿ ಲಾಕರ್‌ನಲ್ಲಿಟ್ಟಿದ್ದ 85 ಲಕ್ಷ ರುಪಾಯಿ ಮೌಲ್ಯದ ಚಿನ್ನಾಭರಣಗಳು ನಾಪತ್ತೆಯಾಗಿವೆ. ಅಚ್ಚರಿಯಾದರೂ ಇದು ಸತ್ಯ.  

ಬೆಂಗಳೂರು(ಆ.02): ಬ್ಯಾಂಕ್‌ಗಳಲ್ಲಿ ವ್ಯವಹಾರ ಮಾಡುವ ಪ್ರತಿಯೊಬ್ಬ ಗ್ರಾಹಕರು ನೋಡಲೇ ಬೇಕಾದ ಸುದ್ದಿಯಿದು. ಬ್ಯಾಂಕ್‌ನಲ್ಲಿ ಇಟ್ಟಿರುವ ನಿಮ್ಮ ಚಿನ್ನ, ಹಣ ಎಷ್ಟು ಸೇಫ್ ಎನ್ನುವುದರ ಬಗ್ಗೆ ನೀವು ಈ ಸ್ಟೋರಿ ನೋಡಿದ ಮೇಲೆ ಕ್ರಾಸ್ ಚೆಕ್ ಮಾಡಿಕೊಳ್ಳಿ.

ಹೌದು, ಬೆಂಗಳೂರಿನ ಜಯನಗರ ಶಾಖೆಯ ಬ್ಯಾಂಕ್ ಆಫ್ ಬರೋಡದಲ್ಲಿ ಲಾಕರ್‌ನಲ್ಲಿಟ್ಟಿದ್ದ 85 ಲಕ್ಷ ರುಪಾಯಿ ಮೌಲ್ಯದ ಚಿನ್ನಾಭರಣಗಳು ನಾಪತ್ತೆಯಾಗಿವೆ. ಅಚ್ಚರಿಯಾದರೂ ಇದು ಸತ್ಯ.  

ಶಿವರಾಜ್‌ ಕುಮಾರ್ ಏರಿಯಾಗೆ ಕಳ್ಳತನಕ್ಕೆ ಬಂದಿದ್ದು ಫಾರಿನ್‌ನಿಂದ..!

ಶಿವಪ್ರಸಾದ್ ಎನ್ನುವವರು  1.73 ಕೆಜಿ ಚಿನ್ನವನ್ನು ಬ್ಯಾಂಕ್ ಆಫ್ ಬರೋಡ ಲಾಕರ್‌ನಲ್ಲಿ ಇಟ್ಟಿದ್ದರು. ಜುಲೈ 22ರಂದು ಲಾಕರ್ ಓಪನ್ ಮಾಡಿದಾಗ ಚಿನ್ನವೆಲ್ಲ ನಾಪತ್ತೆಯಾಗಿದೆ. ಬಳಿಕ ಶಿವಪ್ರಸಾದ್ ಜಯನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಇದೀಗ ಪೊಲೀಸರು ಬ್ಯಾಂಕ್ ಆಫ್ ಬರೋಡ ಸಿಬ್ಬಂದಿಗಳ ವಿರುದ್ಧ FIR ದಾಖಲಿಸಿ ತನಿಖೆ ಆರಂಭಿಸಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.
 

Video Top Stories