ಬಾಂಗ್ಲಾ ಸರಣಿ: ಟೀಂ ಇಂಡಿಯಾದ ಈ ತ್ರಿಮೂರ್ತಿಗಳ ಸ್ಥಾನ ಪಕ್ಕಾ ಆಗುತ್ತಾ..?

ದಕ್ಷಿಣ ಆಫ್ರಿಕಾ ವಿರುದ್ಧ ತವರಿನಲ್ಲೇ ನಡೆದ ಟೆಸ್ಟ್ ಸರಣಿಯಲ್ಲಿ ಟೀಂ ಇಂಡಿಯಾ ಆರಂಭಿಕರಾಗಿ ಮಯಾಂಕ್ ಅಗರ್‌ವಾಲ್ ಹಾಗೂ ರೋಹಿತ್ ಶರ್ಮಾ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಂಡಿದ್ದರು. ಇನ್ನು ಅಶ್ವಿನ್ ಸಹಾ ಅದ್ಭುತ ಪ್ರದರ್ಶನ ತೋರಿ ತಾನೂ ಈಗಲೂ ವಿಕೆಟ್ ಕಬಳಿಸಬಲ್ಲೇ ಎನ್ನುವುದನ್ನು ಸಾಬೀತು ಮಾಡಿದ್ದಾರೆ.

First Published Oct 30, 2019, 4:28 PM IST | Last Updated Oct 30, 2019, 4:28 PM IST

ಬೆಂಗಳೂರು(ಅ.30): ಬಾಂಗ್ಲಾದೇಶ ವಿರುದ್ಧದ ಸರಣಿ ಆರಂಭಕ್ಕೆ ಕೆಲವೇ ದಿನಗಳು ಬಾಕಿ ಉಳಿದಿವೆ. ಇದರ ಬೆನ್ನಲ್ಲೇ ಟೀಂ ಇಂಡಿಯಾದ ಮೂವರು ಆಟಗಾರರು ತಮ್ಮ ಸ್ಥಾನವನ್ನು ಭದ್ರಪಡಿಸಿಕೊಳ್ಳಲು ಎದುರು ನೋಡುತ್ತಿದ್ದಾರೆ.

ಶಕೀಬ್ ಅಲ್ ಹಸನ್ ಕ್ರಿಕೆಟ್'ನಿಂದ 2 ವರ್ಷ ಬ್ಯಾನ್..!

ಹೌದು, ದಕ್ಷಿಣ ಆಫ್ರಿಕಾ ವಿರುದ್ಧ ತವರಿನಲ್ಲೇ ನಡೆದ ಟೆಸ್ಟ್ ಸರಣಿಯಲ್ಲಿ ಟೀಂ ಇಂಡಿಯಾ ಆರಂಭಿಕರಾಗಿ ಮಯಾಂಕ್ ಅಗರ್‌ವಾಲ್ ಹಾಗೂ ರೋಹಿತ್ ಶರ್ಮಾ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಂಡಿದ್ದರು. ಇನ್ನು ಅಶ್ವಿನ್ ಸಹಾ ಅದ್ಭುತ ಪ್ರದರ್ಶನ ತೋರಿ ತಾನೂ ಈಗಲೂ ವಿಕೆಟ್ ಕಬಳಿಸಬಲ್ಲೇ ಎನ್ನುವುದನ್ನು ಸಾಬೀತು ಮಾಡಿದ್ದಾರೆ.

ಆದರೆ ಟೀಂ ಇಂಡಿಯಾದ ಇನ್ನೂ ಮೂವರು ಆಟಗಾರರು ತಮ್ಮ ಸಾಮರ್ಥ್ಯಕ್ಕೆ ತಕ್ಕ ಪ್ರದರ್ಶನ ನೀಡುವಲ್ಲಿ ಯಶಸ್ವಿಯಾಗಿಲ್ಲ. ಈ ಮೂವರು ಟೀಂ ಇಂಡಿಯಾದಲ್ಲಿ ತಮ್ಮ ಸ್ಥಾನ ಪಕ್ಕಾ ಮಾಡಿಕೊಳ್ಳಬೇಕಿದ್ದರೆ, ಬಾಂಗ್ಲಾ ವಿರುದ್ಧದ ಸರಣಿಯಲ್ಲಿ ಮಿಂಚಲೇ ಬೇಕಿದೆ. ಅಷ್ಟಕ್ಕೂ ಯಾರು ಆ ಮೂವರು ತ್ರಿಮೂರ್ತಿಗಳು ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ....