Asianet Suvarna News Asianet Suvarna News

ಟೆಸ್ಟ್ ಸರಣಿ ಆರಂಭಕ್ಕೂ ಮುನ್ನ ಕೊಹ್ಲಿ ಪಡೆ ಭರ್ಜರಿ ಟ್ರಿಪ್

ಟಿ20 ಹಾಗೂ ಏಕದಿನ ಸರಣಿ ಬಳಿಕ ಉಭಯ ತಂಡಗಳು 2 ಪಂದ್ಯಗಳ ಟೆಸ್ಟ್ ಸರಣಿಗೆ ಸಜ್ಜಾಗಿವೆ. ಫೆಬ್ರವರಿ 21ರಿಂದ ಆರಂಭವಾಗಲಿರುವ ಟೆಸ್ಟ್ ಪಂದ್ಯದಲ್ಲಿ ಶುಭಾರಂಭ ಮಾಡಲು ಉಭಯ ತಂಡಗಳು ತುದಿಗಾಲಿನಲ್ಲಿ ನಿಂತಿವೆ.

ವೆಲ್ಲಿಂಗ್ಟನ್(ಫೆ.14): ನ್ಯೂಜಿಲೆಂಡ್ ಪ್ರವಾಸದಲ್ಲಿರುವ ಟೀಂ ಇಂಡಿಯಾ ಟಿ20 ಸರಣಿಯನ್ನು ಕ್ಲೀನ್ ಸ್ವೀಪ್ ಮಾಡಿ ಬೀಗಿತ್ತು. ಇದಾದ ಬಳಿಕ ಏಕದಿನ ಸರಣಿಯಲ್ಲಿ ವೈಟ್‌ವಾಷ್ ಮುಖಭಂಗ ಅನುಭವಿಸಿತ್ತು.

ದಶಕಗಳಿಂದ ಅಬ್ಬರಿಸುತ್ತಿರುವ ಕೊಹ್ಲಿಗೆ ಈಗ ಶತಕದ ಕೊರಗು!

ಇದೀಗ ಟಿ20 ಹಾಗೂ ಏಕದಿನ ಸರಣಿ ಬಳಿಕ ಉಭಯ ತಂಡಗಳು 2 ಪಂದ್ಯಗಳ ಟೆಸ್ಟ್ ಸರಣಿಗೆ ಸಜ್ಜಾಗಿವೆ. ಫೆಬ್ರವರಿ 21ರಿಂದ ಆರಂಭವಾಗಲಿರುವ ಟೆಸ್ಟ್ ಪಂದ್ಯದಲ್ಲಿ ಶುಭಾರಂಭ ಮಾಡಲು ಉಭಯ ತಂಡಗಳು ತುದಿಗಾಲಿನಲ್ಲಿ ನಿಂತಿವೆ.

ನಂಬಿದ್ರೆ ನಂಬಿ, ವಿಶ್ವದ ನಂ.1 ಬೌಲರ್‌ಗೆ ಸಿಕ್ಕಿದ್ದು ಒಂದೇ ಒಂದು ವಿಕೆಟ್..!

ಹೀಗಿರುವಾಗಲೇ ವಿರಾಟ್ ಕೊಹ್ಲಿ ಪಡೆ ಟೆಸ್ಟ್ ಸರಣಿ ಆರಂಭಕ್ಕೂ ಮುನ್ನವೇ ಬಿಡುವಿನ ಸಮಯದಲ್ಲಿ ಕಿವೀಸ್ ಸುಂದರ ತಾಣಗಳಿಗೆ ಭೇಟಿ ನೀಡಿದ್ದಾರೆ. ಸಹ ಆಟಗಾರರೊಂದಿಗೆ ಫೋಟೊ ಕ್ಲಿಕ್ಕಿಸಿಕೊಂಡು ಮಸ್ತ್ ಮಜಾ ಮಾಡಿದ್ದಾರೆ. ಕೊಹ್ಲಿಗೆ ಪತ್ನಿ ಅನುಷ್ಕಾ ಶರ್ಮಾ ಸಾಥ್ ನೀಡಿದ್ದಾರೆ. ಈ ಕುರಿತಾದ ವಿವರ ಇಲ್ಲಿದೆ ನೋಡಿ