Asianet Suvarna News Asianet Suvarna News

ಒಂದೇ ದಿನ ಮೂರು ಇಂಡೋ-ಕಿವೀಸ್‌ ಪಂದ್ಯಗಳು..!

ಒಂದೇ ದಿನ ಭಾರತ ಹಾಗೂ ನ್ಯೂಜಿಲೆಂಡ್‌ನ ವಿವಿಧ ಕ್ರಿಕೆಟ್‌ ತಂಡಗಳು ಮೂರು ವಿವಿಧ ಪಂದ್ಯಗಳಲ್ಲಿ ಮುಖಾಮುಖಿಯಾಗಲಿವೆ. ಈ ಕುರಿತಾದ ವಿವರ ಇಲ್ಲಿದೆ ನೋಡಿ...

ಆಕ್ಲೆಂಡ್(ಜ.24): ವರ್ಷಪೂರ್ತಿ ಒಂದಲ್ಲೊಂದು ಕ್ರಿಕೆಟ್‌ ಪಂದ್ಯ ನಡೆಯುತ್ತಲೇ ಇರುತ್ತದೆ. ಆದರೆ ಬಹಳ ಅಪರೂಪ ಎಂಬಂತೆ ಶುಕ್ರವಾರ ಒಂದೇ ದಿನ ಭಾರತ ಹಾಗೂ ನ್ಯೂಜಿಲೆಂಡ್‌ನ ವಿವಿಧ ಕ್ರಿಕೆಟ್‌ ತಂಡಗಳು ಮೂರು ವಿವಿಧ ಪಂದ್ಯಗಳಲ್ಲಿ ಮುಖಾಮುಖಿಯಾಗಲಿವೆ. 

ಇಂಡೋ-ಕಿವೀಸ್ ಮೊದಲ ಟಿ20ಗೆ ಕ್ಷಣಗಣನೆ ಆರಂಭ

ಆಕ್ಲೆಂಡ್‌ನಲ್ಲಿ ಶುಕ್ರವಾರ 5 ಪಂದ್ಯಗಳ ಸರಣಿಯ ಮೊದಲ ಪಂದ್ಯ ನಡೆಯಲಿದ್ದು, ಐಸಿಸಿ ಟಿ20 ವಿಶ್ವಕಪ್‌ಗೆ ತಯಾರಿಯನ್ನು ತೀವ್ರಗೊಳಿಸಿರುವ ತಂಡ ಮತ್ತಷ್ಟುಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳುವ ವಿಶ್ವಾಸದಲ್ಲಿದೆ.

ಟಿ20ಯಲ್ಲೂ ಕನ್ನಡಿಗ ರಾಹುಲ್‌ ವಿಕೆಟ್ ಕೀಪರ್‌!

ನ್ಯೂಜಿಲೆಂಡ್‌ ಪ್ರವಾಸದಲ್ಲಿರುವ ಭಾರತ ‘ಎ’ ತಂಡ, ಕಿವೀಸ್‌ ‘ಎ’ ತಂಡದ ವಿರುದ್ಧ ಕ್ರೈಸ್ಟ್‌ಚರ್ಚ್‌ನಲ್ಲಿ 2ನೇ ಅನಧಿಕೃತ ಏಕದಿನ ಪಂದ್ಯವನ್ನು ಆಡಲಿದೆ. ಪೃಥ್ವಿ ಶಾ, ಶುಭ್‌ಮನ್‌ ಗಿಲ್‌, ಮಯಾಂಕ್‌ ಅಗರ್‌ವಾಲ್‌ ಸೇರಿದಂತೆ ಪ್ರಮುಖ ಆಟಗಾರರು ಈ ಪಂದ್ಯದಲ್ಲಿ ಆಡಲಿದ್ದಾರೆ.

ಇನ್ನು ದಕ್ಷಿಣ ಆಫ್ರಿಕಾದಲ್ಲಿ ನಡೆಯುತ್ತಿರುವ ಅಂಡರ್‌-19 ವಿಶ್ವಕಪ್‌ನಲ್ಲೂ ಶುಕ್ರವಾರ ಭಾರತ-ನ್ಯೂಜಿಲೆಂಡ್‌ ತಂಡಗಳು ಎದುರಾಗಲಿವೆ.
 

Video Top Stories