ಭಾರತ್ ಲಾಕ್‌ಡೌನ್, ಪೊಲೀಸರ ಮೇಲೆ ಹಲ್ಲೆ: ಆರೋಪಿ ಕಾಲಿಗೆ ಗುಂಡೇಟು!
ಸಂಜಯನಗರ ಪೊಲೀಸರ ಮೇಲೆ ಹಲ್ಲೆ|ಪೊಲೀಸರ ಮೇಲೆ ಹಲ್ಲೆಗೆ ಮುಂದಾಗಿದ್ದ ಆರೋಪಿ| ಸ್ಥಳ ಮಹಜರು ವೇಳೆ ಬಾಲಬಿಚ್ಚಿದ ತಾಜುದ್ದಿನ್| ಪೊಲೀಸರಿಂದ ತಪ್ಪಿಸಿಕೊಳ್ಳಲು ಯತ್ನ|
ಬೆಂಗಳೂರು(ಮಾ.26): ಭಾರತ್ ಲಾಕ್‌ಡೌನ್ ವೇಳೆಯಲ್ಲಿ ನಗರದಲ್ಲಿ ತಿರುಗಾಡುತ್ತಿದ್ದ ಯುವಕರನ್ನ ಪ್ರಶ್ನಿಸಿದ ಸಂಜಯನಗರ ಪೊಲೀಸರ ಮೇಲೆ ಹಲ್ಲೆ ನಡೆಸಿದ ಘಟನೆ ಬುಧವಾರ ನಡೆದಿತ್ತು. ತಾಜುದ್ದಿನ್ ಎಂಬಾತನೇ ಪೊಲೀಸರು ಮೇಲೆ ಹಲ್ಲೆಗೆ ಮುಂದಾಗಿದ್ದನು.
ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ತಾಜುದ್ದಿನ್‌ನನ್ನ ಘಟನೆ ಸ್ಥಳ ಮಹಜರು ವೇಳೆ ಬಾಲಬಿಚ್ಚಿದ ತಾಜುದ್ದಿನ್ ಪೊಲೀಸರಿಂದ ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ. ಅಷ್ಟೇ ಅಲ್ಲದೆ ಓಡಿ ಕಲ್ಲುಗಳಿಂದ ಪೊಲೀಸರ ಮೇಲೆಯೇ ಹಲ್ಲೆಗೆ ಮುಂದಾಗಿದ್ದಾನೆ. ಈ ವೇಳೆ ಪೊಲೀಸರು ಗುಂಡು ಹಾರಿಸಿದ್ದಾರೆ. ಆರೋಪಿ ತಾಜುದ್ದಿನ್ ಕಾಲಿಗೆ ಗುಂಡು ತಗುಲಿದೆ.