Asianet Suvarna News Asianet Suvarna News

ಮಾರುಕಟ್ಟೆ ಪರಿಶೀಲನೆಗೆ ದಿಢೀರ್ ಭೇಟಿಕೊಟ್ಟ ಸಚಿವ ಎಸ್. ಟಿ. ಸೋಮಶೇಖರ್

ವ್ಯಾಪಾರಸ್ಥರ ಹಾಗೂ ಗ್ರಾಹಕರ ಜತೆ ಸಚಿವ ಸೋಮಶೇಖರ್ ಮಾತುಕತೆ ನಡೆಸಿದರು. ಈ ವೇಳೆ ಚೆಕ್‌ ಪೋಸ್ಟ್ ಕಡೆ ಪೊಲೀಸರ ಕಿರುಕುಳದ ಬಗ್ಗೆ ಸಚಿವರಿಗೆ ತಮ್ಮ ಅಳಲನ್ನು ತೋಡಿಕೊಂಡರು.

ಬೆಂಗಳೂರು(ಏ.04): ಮಾರುಕಟ್ಟೆಯ ವ್ಯವಸ್ಥೆ ಪರಿಶೀಲಿಸಲು ಸಹಕಾರ ಸಚಿವ ಎಸ್‌.ಟಿ. ಸೋಮಶೇಖರ್ ನಗರದ ಸಿಂಗೇನಹಳ್ಳಿ ಮಾರುಕಟ್ಟೆಗೆ ದಿಢೀರ್ ಬೇಡಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಬೆಂಗಳೂರು ಲಾಕ್‌ಡೌನ್: ರಸ್ತೆಯಲ್ಲಿ ಬೇಕಾಬಿಟ್ಟಿ ಓಡಾಡುವವರಿಗೆ ಬಿಸಿ ಮುಟ್ಟಿಸಿದ ಖಾಕಿ ಪಡೆ

ಕೊರೋನಾ ವೈರಸ್ ಭೀತಿಯಿಂದಾಗಿ ಈಗಾಗಲೇ ದೇಶಾದ್ಯಂತ ಲಾಕ್‌ಡೌನ್ ಘೋ‍ಷಣೆ ಮಾಡಲಾಗಿದೆ. ಇದರ ಬೆನ್ನಲ್ಲೇ ತರಕಾರಿ ಸಾಗಾಟ ನಡೆಸಲು ರೈತರು ಸಾಕಷ್ಟು ಕಸರತ್ತು ಪಡುತ್ತಿದ್ದಾರೆ. ಈ ವೇಳೆ ವ್ಯಾಪಾರಸ್ಥರ ಹಾಗೂ ಗ್ರಾಹಕರ ಜತೆ ಮಾತುಕತೆ ನಡೆಸಿದರು. ಈ ವೇಳೆ ಚೆಕ್‌ ಪೋಸ್ಟ್ ಕಡೆ ಪೊಲೀಸರ ಕಿರುಕುಳದ ಬಗ್ಗೆ ಸಚಿವರಿಗೆ ತಮ್ಮ ಅಳಲನ್ನು ತೋಡಿಕೊಂಡರು.

ದೀಪ ಬೆಳಗಿಸೋಣ ಅಭಿಯಾನ: 9 ನಿಮಿಷಕ್ಕೆ 400 ಕೋಟಿಯಷ್ಟು ನಷ್ಟ ಸಾಧ್ಯತೆ?

ಈ ಬಗ್ಗೆ ತಕ್ಷಣ ಪೊಲೀಸ್ ಅಧಿಕಾರಿ ಕಮಲ್‌ ಪಂತ್‌ಗೆ ಫೋನ್ ಮೂಲಕ ರೈತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಬೇಕು ಎಂದು ತಿಳಿಸಿದ್ದೇನೆ ಎಂದು ಸಚಿವ ಸೋಮಶೇಖರ್ ತಿಳಿಸಿದ್ದಾರೆ.